ಚನ್ನರಾಯಪಟ್ಟಣ-ನಲ್ಲೂರು ಗ್ರಾಪಂ, ಕಾಂಗ್ರೆಸ್ ತೆಕ್ಕೆಗೆ

ಈ ಸುದ್ದಿಯನ್ನು ಶೇರ್ ಮಾಡಿ

devanahalli

ದೇವನಹಳ್ಳಿ ಸೆ.1- ತಾಲೂಕಿನ ಚನ್ನರಾಯಪಟ್ಟಣ ಮತ್ತು ನಲ್ಲೂರು ಗ್ರಾಪಂ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತರ ಮೈತ್ರಿಕೂಟಕ್ಕೆ ಮುಖಭಂಗವಾಗಿದೆ. ನಲ್ಲೂರು ಮತ್ತು ಚನ್ನರಾಯಪಟ್ಟಣ ಗ್ರಾಪಂಗಳಲ್ಲಿ ತಲಾ 15 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ನಲ್ಲೂರು ಗ್ರಾಪಂನಲ್ಲಿ 10 ಸ್ಥಾನ, ಜೆಡಿಎಸ್ ಬೆಂಬಲಿತರು 5 ಸ್ಥಾನ, ಚನ್ನರಾಯಪಟ್ಟಣ ಗ್ರಾಪ ನಲ್ಲಿ ಕಾಂಗ್ರೆಸ್ ಬೆಂಬಲಿತರು 10, ಜೆಡಿಎಸ್ ಬೆಂಬಲಿತರು 5 ಸ್ಥಾನ ಪಡೆಯುವುದರಲ್ಲಿ ತೃಪ್ತಿ ಪಡೆದಿದ್ದಾರೆ. ಎರಡು ಗ್ರಾಪಂಗಳಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದೆ.

ದಿನ್ನೂರು ಚನ್ನರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ದಿನ್ನೂರು ಮತ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಮುನಿಕೃಷ್ಣಪ್ಪ ಮೂರು ಮತಗಳ ಅಂತರದಿಂದ ತಮ್ಮ ಪ್ರತಿ ಸ್ಪರ್ಧಿ ದೇವರಾಜು ಅವರನ್ನು ಸೋಲಿಸುವುದರ ಮೂಲಕ ಹ್ಯಾಟ್ರಿಕ್ ಜಯಭೇರಿ ಭಾರಿಸಿದ್ದಾರೆ.  ಜಿಪಂ ಮತ್ತು ತಾಪಂ ಚುನಾವಣೆಗಳಲ್ಲಿ ಚನ್ನರಾಯಪಟ್ಟಣ ಹೋಬಳಿ ಕಾಂಗ್ರೆಸ್ ಭದ್ರಕೋಟೆಯಾಗಿ ಗ್ರಾಪಂ ಜುನಾವಣೆಯಲ್ಲಿಯೂ ಸಹ ಜನಾದೇಶ ನೀಡಿ ಸಾಬೀತು ಪಡಿಸಿದೆ.ಎರಡು ಗ್ರಾಪಂಗಳ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಮಿನಿವಿಧಾನಸೌಧ ಮುಂಭಾಗದಲ್ಲಿ ವಿಜಯೋತ್ಸವವನ್ನು ಆಚರಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin