ಚನ್ನರಾಯಪಟ್ಟಣ, ನಲ್ಲೂರು ಚುನಾವಣೆ : 158 ನಾಮಪತ್ರ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

devanahalli-9

ವಿಜಯಪುರ, ಆ.20- ಇಲ್ಲಿಗೆ ಸಮೀಪದ ಚನ್ನರಾಯಪಟ್ಟಣ ಹಾಗೂ ನಲ್ಲೂರು ಗ್ರಾಮಪಂಚಾಯಿತಿಗಳಿಗೆ  28ರಂದು ಚುನಾವಣೆ ನಡೆಯುತ್ತಿದ್ದು, ಚನ್ನರಾಯಪಟ್ಟಣ ಗ್ರಾಪಂಗೆ 83, ನಲ್ಲೂರು ಗ್ರಾಪಂಗೆ 75 ನಾಮಪತ್ರಗಳು ಸಲ್ಲಿಕೆಯಾಗಿವೆ. ಬೆಂ.ಗ್ರಾ.ಜಿಪಂ ಸದಸ್ಯ ಲಕ್ಷ್ಮಿನಾರಾಯಣಪ್ಪ ಮಾತನಾಡಿ, ಪಂಚಾಯ್ತಿಯ ಎರಡೂ ಕ್ಷೇತ್ರಗಳ ಎಲ್ಲ 15-15 ಕ್ಷೇತ್ರಗಳಿಗೂ ಕಾಂಗ್ರೆಸ್ ವತಿಯಿಂದ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಈ ಬಾರಿ ಎರಡೂ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಯಾವುದೇ ಬಂಡಾಯವಿಲ್ಲವೆಂದು ತಿಳಿಸಿದರು. ಹಿರಿಯ ಕಾಂಗ್ರೆಸ್ ಮುಖಂಡ ಚೀಮಾಚನಹಳ್ಳಿ ರಾಮಚಂದ್ರಪ್ಪ, ಚನ್ನರಾಯಪಟ್ಟಣ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಬು, ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಪಂಚಾಯ್ತಿ ಮಾಜಿ ಅಧ್ಯಕ್ಷ ಮುನಿಕೃಷ್ಣ, ಎಂಪಿಸಿಎಸ್ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಹ್ಯಾಡಾಳ ಚನ್ನಕೇಶವ, ನಾಗನಾಯಕನಹಳ್ಳಿ ಅಕ್ಕಯ್ಯಮ್ಮ ಮುನಿಯಪ್ಪ, ಮುನಿರೆಡ್ಡಿ, ಮಂಜುಳಮ್ಮ, ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin