ಚಪ್ಪಲಿಯಿಂದ ಏರ್‍ಇಂಡಿಯಾ ಸಿಬ್ಬಂದಿ ಥಳಿಸಿದ್ದ ಗಾಯಕ್ವಾಡ್’ಗೆ ವಿಮಾನಯಾನ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Raveendra-Gayakwad

ನವದೆಹಲಿ/ಮುಂಬೈ, ಮಾ.24-ಕ್ಷುಲ್ಲಕ ಕಾರಣಕ್ಕಾಗಿ ಏರ್‍ಇಂಡಿಯಾ ಸಿಬ್ಬಂದಿಯನ್ನು ಚಪ್ಪಲಿಯಿಂದ ಥಳಿಸಿ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪು ಪಟ್ಟಿಗೆ ಸೇರಿರುವ ಫೆಡರೇಷನ್ ಆಫ್ ಇಂಡಿಯನ್ ಏರ್‍ಲೈನ್ಸ್ (ಎಫ್‍ಐಎ).ವಿಮಾನಯಾನ ಮಾಡುವುದನ್ನು ನಿಷೇಧಿಸಿದೆ. ಅಲ್ಲದೇ ಸಂಸದರ ಗೂಂಡಾಗಿರಿ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.  ಏರ್ ಇಂಡಿಯಾದ ಹಿರಿಯ ಡ್ಯೂಟಿ ವ್ಯವಸ್ಥಾಪಕ ಶಿವಕುಮಾರ್ ಅವರಿಗೆ 25 ಬಾರಿ ಚಪ್ಪಲಿಯಿಂದ ಥಳಿಸಿ ಉದ್ಧಟನತನ ತೋರಿದ್ದೇ ಅಲ್ಲದೇ ತಮ್ಮ ಕೃತ್ಯವನ್ನೂ ಸಮರ್ಥಿಸಿಕೊಂಡಿರುವ ಗಾಯಕ್ವಾಡ್ ವರ್ತನೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಶಿವಸೇನೆ ಗಾಯಕ್ವಾಡ್‍ಗೆ ಸಮನ್ಸ್ ಜಾರಿಗೊಳಿಸಿ ವಿವರಣೆ ಕೋರಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‍ಐಎ ನಾಲ್ಕು ವಿಮಾನಗಳಲ್ಲಿ ಸಂಸದರು ಪ್ರಯಾಣ ಮಾಡುವುದನ್ನು ನಿರ್ಬಂಧಿಸಿದೆ. ಜೆಟ್ ಏರ್‍ವೇಸ್, ಇಂಡಿಗೋ, ಸ್ಪೈಸ್‍ಜೆಟ್ ಮತ್ತು ಗೋಏರ್ ಈ ವಿಮಾನಗಳಲ್ಲಿ ಗಾಯಕ್ವಾಡ್ ಇನ್ನು ಮುಂದೆ ಪ್ರಯಾಣಿಸುವಂತಿಲ್ಲ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಮತ್ತು ವಿಮಾನಯಾನದಿಂದ ಗಾಯಕ್ವಾಡ್‍ರನ್ನು ನಿರ್ಬಂಧಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಫ್‍ಐಎ ಮೂಲಗಳು ತಿಳಿಸಿವೆ. ಈ ನಾಲ್ಕು ವಿಮಾನ ಸಂಸ್ಥೆಗಳು ಎಫ್‍ಐಎಗೆ ಒಳಪಟ್ಟಿವೆ.

ಇನ್ನೂ ಕೆಲವು ವಿಮಾನಯಾನ ಸಂಸ್ಥೆಗಳೂ ಕೂಡ ಇದೆ ಕೈಗೊಳ್ಳಲು ನಿರ್ಧರಿಸಿವೆ ಎಂದು ಮೂಲಗಳು ಹೇಳಿವೆ. ಪ್ರಯಾಣಿಕರ ಪಟ್ಟಿಯಿಂದ ಗಾಯಕ್ವಾಡ್ ಹೆಸರನ್ನು ತೆಗೆದುಹಾಕಲು ನಾವು ಸಿದ್ದರಿದ್ದೇವೆ. ಅವರು ವಿಮಾನಯಾನ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು ಈಗಾಗಲೇ ಭರವಸೆ ನೀಡಿದ್ದಾರೆ.  ಈ ಮಧ್ಯೆ, ಶಿವಸೇನೆ ವರಿಷ್ಠರು ಗಾಯಕ್ವಾಡ್‍ಗೆ ಸಮನ್ಸ್ ಜಾರಿಗೊಳಿಸಿ ಕಚೇರಿಗೆ ಖುದ್ದು ಹಾಜರಾಗಿ ವಿವರಣೆ ನೀಡವಂತೆ ಸೂಚಿಸಿದ್ದಾರೆ.
ಪುಣೆಯಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಸೀಟು ಕೊಡಲಿಲ್ಲ ಎಂಬ ಕಾರಣಕ್ಕಾಗಿ ಗುರುವಾರ ತನ್ನ ತಂದೆ ವಯಸ್ಸಿನ ಶಿವಕುಮಾರ್ ಅವರ ಮೇಲೆ ಗಾಯಕ್ವಾಡ್ 25 ಬಾರಿ ಚಪ್ಪಲಿಯಿಂದ ಥಳಿಸಿ ದೌರ್ಜನ್ಯ ಎಸಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin