ಚರ್ಚ್’ನಲ್ಲಿ ಬೈಬಲ್ ಅಧ್ಯಯನ ಮಾಡುತ್ತಿದ್ದ 9 ಮಂದಿಯನ್ನು ಕೊಂದಿದ್ದ ಉಗ್ರ ಡೈಲಾನ್ ರೂಫ್‍ಗೆ ಗಲ್ಲು

ಈ ಸುದ್ದಿಯನ್ನು ಶೇರ್ ಮಾಡಿ

Dylon-Roof-n

ಚಾರ್ಲ್‍ಸ್ಟನ್, ಜ. 11- ಚರ್ಚ್ ಒಂದರಲ್ಲಿ ಬೈಬಲ್ ಅಧ್ಯಯನ ನಡೆಸುತ್ತಿದ್ದ ಒಂಭತ್ತು ಮಂದಿ ಕಪ್ಪು ವರ್ಣೀಯರನ್ನು ಅತ್ಯಂತ ದಾರುಣವಾಗಿ ಹತ್ಯೆ ಮಾಡಿದ್ದ ಭಯೋತ್ಪಾದಕ ಡೈಲಾನ್ ರೂಫ್‍ಗೆ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜನಾಂಗೀಯ ದ್ವೇಷದ ಕಾರಣಕ್ಕಾಗಿ ಕಪ್ಪು ವರ್ಣೀಯರನ್ನು ಹತ್ಯೆ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾದ ಮೊದಲ ಉಗ್ರ ರೂಫ್ ಆಗಿದ್ದಾನೆ ಎಂದು ವರದಿ ತಿಳಿಸಿದೆ. ಶಿಕ್ಷೆ ಪ್ರಕಟಿಸುವ ಸಂದರ್ಭ ರೂಫ್ ಯಾವುದೇ ರೀತಿಯ ಭಯವನ್ನಾಗಲಿ, ಆತಂಕವನ್ನಾಗಲಿ ವ್ಯಕ್ತಪಡಿಸಲಿಲ್ಲ. ಒಂಭತ್ತು ಮಂದಿಯ ನರಮೇಧ ನಡೆಸಿದ ಬಗ್ಗೆಯೂ ರೂಫ್ ಎಂಥದೇ ಪಶ್ಚಾತ್ತಾಪವನ್ನು ವ್ಯಕ್ತಪಡಿಸಲಿಲ್ಲ.

ಅಷ್ಟೇ ಅಲ್ಲ ಕೊನೆಯದಾಗಿ ಮೇಲ್ಮನವಿಗೆ ಅವಕಾಶ ನೀಡುವ ಬಗ್ಗೆ ನ್ಯಾಯಾಧೀಶರು ಸೂಚಿಸಿದಾಗ ರೂಫ್ ಮುಲಾಜಿಲ್ಲದೆ ನಿರಾಕರಿಸಿದ. ಅಲ್ಲದೆ ನಾನು ಮಾಡಬೇಕಾದ್ದನ್ನೇ ಮಾಡಿದ್ದೇನೆ ಎಂದು ಘೋಷಿಸಿದ. ಕಳೆದ 2015ರ ಜೂನ್‍ನಲ್ಲಿ ರೂಫ್ ಇಲ್ಲಿನ ಚರ್ಚ ಒಂದರ ಪಾದ್ರಿ ಕ್ಲೆಮೆಂಟ್ ಪಿಂಕ್ನೆ ಸೇರಿದಂತೆ 9 ಜನರನ್ನು ಭೀಕರವಾಗಿ ಕೊಲೆ ಮಾಡಿದ್ದ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin