ಚರ್ಮದ ಬ್ಯಾಗ್ ಮೇಲೂ ಬಿತ್ತು ಗೋರಕ್ಷಕರ ಕಣ್ಣು..!

ಈ ಸುದ್ದಿಯನ್ನು ಶೇರ್ ಮಾಡಿ

Cow

ಮುಂಬೈ, ಆ.21-ದೇಶಾದ್ಯಂತ ಗೋರಕ್ಷಕರ ಹಾವಳಿ ಹೆಚ್ಚುತ್ತಿದ್ದು, ಅವರ ಕಣ್ಣು ಈಗ ಚರ್ಮದ ಬ್ಯಾಗ್ಗಳನ್ನು ಹೊಂದಿದವರ ಮೇಲೆ ಬಿದ್ದಿದೆ. ಹಸು ಚರ್ಮದ ಬ್ಯಾಗ್ ಹೊಂದಿದ್ದಾರೆ ಎಂದು ಭಾವಿಸಿ ಖಾಸಗಿ ಸಂಸ್ಥೆಯ ಅಧಿಕಾರಿಯೊಬ್ಬರ ಮೇಲೆ ಗೋರಕ್ಷಕ ಕಾರ್ಯಕರ್ತರು ದೌರ್ಜನ್ಯ ಎಸಗಿದ ಪ್ರಕರಣವೊಂದು ವರದಿಯಾಗಿದೆ.  ವಾಣಿಜ್ಯ ನಗರಿಯ ಪ್ರೊಡಕ್ಷನ್ ಹೌಸ್ ಒಂದರಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿರುವ ವರುಣ್ ಕಶ್ಯಪ್ ಅವರಿಗೆ ಗೋರಕ್ಷಕ ಪಡೆ ಕಿರುಕುಳ ನೀಡಿದೆ. ತಮಗಾದ ಈ ಆತಂಕದ ಅನುಭವವನ್ನು ಅವರು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ನಾನು ಅಂಬೊಲಿಯಲ್ಲಿ ಆಟೋರಿಕ್ಷಾದಲ್ಲಿ ಹೋಗುತ್ತಿದ್ದೆ. ನನ್ನ ಬಳಿ ಇದ್ದ ಬ್ಯಾಗ್ ನೋಡಿದ ಚಾಲಕ ಇದು ಹಸು ಚರ್ಮದಿಂದ ತಯಾರಿಸಿದ ಚೀಲವೇ ಎಂದು ಪ್ರಶ್ನಿಸಿದ. ಇಲ್ಲ, ಇದು ಒಂಟೆ ಚರ್ಮದ್ದು. ಪುಷ್ಕರ್ ಮೇಳದಲ್ಲಿ ನಾನು ಇದನ್ನು ನಾನು ಖರೀದಿಸಿದೆ ಎಂದು ಉತ್ತರಿಸಿದೆ.

ಸ್ವಲ್ಪ ಸಮಯದ ಬಳಿಕ ಆಟೋಚಾಲಕ ನನ್ನನ್ನು ಸೂಕ್ಷ್ಮವಾಗಿ ಗಮನಿಸಿ, ನೀವು ಯಾವ ಊರಿನವರು ಎಂದು ಕೇಳಿದ. ನಾನು ಅಸ್ಸಾಂ ಎಂದೆ. ಓಹೋ ಬಾಂಗ್ಲಾದೇಶದ ಪಕ್ಕದಲ್ಲಿರುವ ರಾಜ್ಯವಲ್ಲವೆ ನಿಮ್ಮದು ಎಂದು ಹೇಳುತ್ತಾ ವೇಗವಾಗಿ ಆಟೋ ಓಡಿಸಿಕೊಂಡು ದೇವಸ್ಥಾನ ಬಳಿ ಬಂದ. ಆನಂತರ ಸನ್ನೆ ಮಾಡಿದ್ದಾನೆ. ಆಗ ತಿಲಕ ಧರಿಸಿದ ಮೂರು ಮಂದಿ ಬಂದು ಸಲ್ಲದ ಪ್ರಶ್ನೆಗಳನ್ನು ಕೇಳಿ ನನ್ನ ಬ್ಯಾಗ್ ತಪಾಸಣೆ ಮಾಡಿದರು. ನಾನು ಆಕ್ಷೇಪ ವ್ಯಕ್ತಪಡಿಸಿದಾಗ, ಅವರು ನನಗೆ ಧಮ್ಕಿ ಹಾಕಿದರು. ನಂತರ ನಾನು ಅಸ್ಸಾಮಿ ಬ್ರಾಹ್ಮಣನೆಂದು ತಿಳಿದು ಬಿಟ್ಟುಬಿಟ್ಟರು. ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಘಟನೆಯನ್ನು ಕಶ್ಯಪ್ ವಿವರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin