ಚಲನಚಿತ್ರ ನೀತಿ ಕರಡು ಸರ್ಕಾರಕ್ಕೆ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Film

ಬೆಂಗಳೂರು, ಆ.23- ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗುತ್ತಿರುವ ಜಾಗದ ಸಮೀಪ ಚಲನಚಿತ್ರ ರಂಗದವರ ವಸತಿಗಾಗಿ 100 ಎಕರೆ ಜಾಗ, ಪರಭಾಷಾ ಚಿತ್ರಗಳಿಗೆ 5ರೂ. ಹೆಚ್ಚುವರಿ ತೆರಿಗೆ, ಡಾ.ರಾಜ್ಕುಮಾರ್ ಜನ್ಮ ದಿನಾಚರಣೆಯಂದೇ ಚಿತ್ರರಂಗದ ವಾರ್ಷಿಕ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವಾರು ಮಹತ್ವದ ಶಿಫಾರಸುಗಳ ಚಲನಚಿತ್ರ ಕರಡು ನೀತಿಯನ್ನು ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.  ಕನ್ನಡ ಚಿತ್ರರಂಗಕ್ಕೆ ಈವರೆಗೂ ತಮ್ಮದೇ ಆದ ನೀತಿ ಇರಲಿಲ್ಲ. ಈ ಕುರಿತು ಕಳೆದ 8 ತಿಂಗಳ ಹಿಂದೆ ನಡೆದ ಸಭೆಯಲ್ಲಿ ಚರ್ಚೆಯಾದಾಗ ಮುಖ್ಯಮಂತ್ರಿಯವರು 13 ಜನರ ಸಮಿತಿಯೊಂದನ್ನು ರಚಿಸಿದ್ದರು.  ಈ ಸಮಿತಿ ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಇನ್ನಿತರೆ ರಾಜ್ಯಗಳಲ್ಲಿ ಅಧ್ಯಯನ ನಡೆಸಿ 15ಕ್ಕೂ ಹೆಚ್ಚು ಸಭೆಗಳನ್ನು ಮಾಡಿ ಸಿದ್ದಪಡಿಸಿದ ಕರಡು ನೀತಿಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿತು.

ಪ್ರತಿ ವರ್ಷ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯುತ್ತಿಲ್ಲ. ಮೂರ್ನಾ್ಲ್ಕು ವರ್ಷ ವಿಳಂಬವಾಗುತ್ತಿದೆ. ಡಾ.ರಾಜ್ಕುಮಾರ್ ಅವರ ಜನ್ಮ ದಿನವಾದ ಏ.24ರಂದೇ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಿ. ಸರ್ಕಾರದ ವತಿಯಿಂದಲೂ ಅಂದು ಕಾರ್ಯಕ್ರಮ ನಡೆಯುವುದರಿಂದ ಪ್ರಶಸ್ತಿ ಪ್ರದಾನ ಸಮಾರಂಭವೂ ಜತೆಗೂಡಿದರೆ ಅನುಕೂವಾಗಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೈಸೂರಿನಲ್ಲಿ 140 ಎಕರೆ ಜಾಗದಲ್ಲಿ ಚಿತ್ರನಗರಿ ನಿರ್ಮಾಣವಾಗುತ್ತಿದ್ದು, ನಂಜನ ಗೂಡು ರಸ್ತೆಯಲ್ಲಿ 260 ಎಕರೆ ಜಾಗ ಇದೆ. ಅದರಲ್ಲಿ 100 ಎಕರೆಯನ್ನು ಚಿತ್ರರಂಗದವರ ವಸತಿ ಉದ್ದೇಶಗಳಿಗೆ ರಿಯಾಯ್ತಿ ದರದಲ್ಲಿ ಒದಗಿಸುವಂತೆ ಮನವಿ ಮಾಡಲಾಗಿದೆ.

ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿರುವ 300 ಜನತಾ ಚಿತ್ರಮಂದಿರಗಳಿಗೆ ತಲಾ 50 ಲಕ್ಷ ಸಹಾಯಧನ ನೀಡಬೇಕು. ಜತೆಗೆ ಹಾಲಿ ಇರುವ ಆಯ್ದ ಚಿತ್ರಮಂದಿರಗಳ ನವೀಕರಣಕ್ಕೆ 25ಲಕ್ಷ ರೂ. ಸಹಾಯ ಧನ ನೀಡಬೇಕು, ಸಹಾಯಧನ ಪಡೆಯುವ ಚಿತ್ರಮಂದಿರಗಳಿಗೆ ಕನ್ನಡ ಚಿತ್ರಗಳನ್ನೇ ಕಡ್ಡಾಯವಾಗಿ ಪ್ರದರ್ಶಿಸುವಂತೆ ಷರತ್ತು ವಿಧಿಸಬೇಕು, ಸಾವಿರ ಕುರ್ಚಿಗಳ ದೊಡ್ಡ ಚಿತ್ರಮಂದಿರಗಳು ಈಗಿನ ಕಾಲಕ್ಕೆ ಹೊಂದಾಣಿಕೆಯಾಗದೇ ಇರುವುದರಿಂದ ಅವುಗಳನ್ನು ವಿಭಜಿಸಿ 300 ಸೀಟುಗಳ ಚಿತ್ರಮಂದಿರ ನಿರ್ಮಾಣ ಮಾಡಲು 25 ಲಕ್ಷ ರೂ. ಸಹಾಯಧನ ನೀಡಬೇಕು.

ಚಲನಚಿತ್ರ ಮಂದಿರ ನಿರ್ಮಾಣಕ್ಕೆ ಏಕಗವಾಕ್ಷಿ ಯೋಜನೆಯಡಿ ಲೈಸೆನ್ಸ್ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು. ಲೈಸೆನ್ಸ್ಗಾಗಿ ವಿವಿಧೆಡೆ ಅಲೆಯುವುದನ್ನು ತಪ್ಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರವನ್ನು ಗರಿಷ್ಠ 120ರೂ.ಗೆ ನಿಗದಿ ಮಾಡಬೇಕು. ರಾಷ್ಟ್ರೀಯ ಸ್ವರ್ಣಕಮಲ ಪಡೆದ ಚಲನಚಿತ್ರಕ್ಕೆ 25ಲಕ್ಷ, ರಾಷ್ಟ್ರೀಯ ರಜತ ಮತ್ತು ರಾಷ್ಟ್ರೀಯ ಉತ್ತಮ ಚಲನಚಿತ್ರ ಪ್ರಶಸ್ತಿ ಪಡೆದ ಕನ್ನಡ ಚಲನಚಿತ್ರಗಳಿಗೆ ತಲಾ 20ಲಕ್ಷ ರೂ. ಸಹಾಯ ಧನ ನೀಡಬೇಕು. ಕಾದಂಬರಿ ಆಧಾರಿತ ಗುಣಾತ್ಮಕ ಚಲನಚಿತ್ರಗಳಿಗೆ 20 ಲಕ್ಷ ಹಾಗೂ ಸದಭಿರುಚಿಯ ಗುಣಾತ್ಮಕ 100 ಚಿತ್ರಗಳಿಗೆ ನೀಡುತ್ತಿರುವ 10 ಲಕ್ಷ ರೂ. ಸಹಾಯಧನವನ್ನು 15 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂದು ಶಿಫಾರಸು ಮಾಡಲಾಗಿದೆ.

ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಗಳಿಗೆ ಉತ್ತರ ಪ್ರದೇಶದಲ್ಲಿ ಒಂದು ಕೋಟಿ, ಬಿಹಾರದಲ್ಲಿ ಎರಡು ಕೋಟಿ, ಮಹಾರಾಷ್ಟ್ರದಲ್ಲಿ 40 ಲಕ್ಷ ರೂ. ಸಹಾಯಧನ ನೀಡಲಾಗುತ್ತಿದೆ. ರಾಜ್ಯದಲ್ಲಿ ತನ್ನದೇ ಆದ ಇತಿಮಿತಿಯಲ್ಲಿ ಸಹಾಯಧನ ಹೆಚ್ಚಿಸಬೇಕು. ಕೊಡವ, ತುಳು, ಕೊಂಕಣಿ ಮತ್ತು ಬ್ಯಾರಿ ಚಿತ್ರಗಳಿಗೆ ಈ ಸಹಾಯಧನವನ್ನು ವಿಸ್ತರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಇನ್ನು ಮುಂದೆ ಅಂತಹ ಪದ ಬಳಕೆ ಮಾಡು ವುದಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುತ್ತೇವೆ ಎಂದು ಸಾ.ರಾ. ಗೋವಿಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಚಿತ್ರರಂಗದ ರಾಕ್ಲೈನ್ವೆಂಕಟೇಶ್, ಭಾರತಿವಿಷ್ಣುವರ್ಧನ್, ಗಿರೀಶ್ ಕಾಸರವಳ್ಳಿ, ಉಮೇಶ್ ಬಣಕರ್, ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಮತ್ತಿತರರಿದ್ದರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin