ಚಲಿಸುತ್ತಿದ್ದ ಬಸ್‍ನಲ್ಲಿ ಆಕಸ್ಮಿಕ ಬೆಂಕಿ, ಪ್ರಾಣಾಪಾಯದಿಂದ ಪಾರಾದ 30 ಪ್ರಯಾಣಿಕರು

ಈ ಸುದ್ದಿಯನ್ನು ಶೇರ್ ಮಾಡಿ

APSRTC

ಹೈದರಾಬಾದ್, ಫೆ.22-ಶಾರ್ಟ್ ಸಕ್ರ್ಯೂಟ್‍ನಿಂದ ಬಸ್‍ಗೆ ಬೆಂಕಿ ತಗಲಿ 30 ಪ್ರಯಾಣಿಕರು ಅಶ್ಚರ್ಯಕರ ರೀತಿಯಲ್ಲಿ ಪಾರಾದ ಘಟನೆ ಹೈದರಾಬಾದ್ ಬಳಿ ಸಂಭವಿಸಿದೆ.   ಹೈದರಾಬಾದ್‍ನಿಂದ 50 ಕಿ.ಮೀ. ದೂರದಲ್ಲಿರುವ ಅಲೈರ್‍ನಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಂಭವಿಸಿದೆ. ವಾರಂಗಲ್‍ನಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‍ಆರ್‍ಟಿಸಿ) ಬಸ್ಸಿನ ಎಂಜಿನ್‍ನಲ್ಲಿ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿತು. ತಕ್ಷಣ ಎಚ್ಚೆತ್ತ ಚಾಲಕ ಬಸ್‍ನಲ್ಲಿದ್ದ ಎಲ್ಲ 30 ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಯುವಂತೆ ತಿಳಿಸಿದರು. ಎಲ್ಲರೂ ಬಸ್‍ನಿಂದ ಇಳಿದ ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ವಾಹವನ್ನು ಆವರಿಸಿತು.

ತೆಲಂಗಾಣ ಸಾರಿಗೆ ಸಚಿವ ಪಿ. ಮಹೇಂಧ್ರ ರೆಡ್ಡಿ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.   ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಮೊನ್ನೆ ರಾತ್ರಿ ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ತಗುಲಿ ಮಹಿಳೆಯೊಬ್ಬಳು ಮೃತಪಟ್ಟು, ಅನೇಕರು ಗಾಯಗೊಂಡ ದುರ್ಘಟನೆಯನ್ನು ಇಲ್ಲಿ ಉಲ್ಲೇಖಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin