ಚಲಿಸುತ್ತಿದ್ದ ರೈಲಿಗೆ ಸಿಲುಕಿ ನಟ ಅಕ್ಷಯ್ ಕುಮಾರ್ ಬಾಡಿಗಾರ್ಡ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Akshay-Kumar-01

ಮಥುರಾ ಡಿ. 14 : ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಅವರ ಅಂಗರಕ್ಷಕರೊಬ್ಬರು, ಮಥುರಾ ಜಂಕ್ಷನ್ ನಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಅನೇಕ ವರ್ಷಗಳಿಂದ ಅಕ್ಷಯ್ ಕುಮಾರ್ ಅವರ ಖಾಸಗಿ ಅಂಗರಕ್ಷಕ ಪಡೆಯಲ್ಲಿದ್ದ ಮನೋಜ್ ಶರ್ಮ ಮೃತಪಟ್ಟವರು. ದೆಹಲಿ-ಬೆಂಗಳೂರು ನಡುವೆ ಸಂಚರಿಸುವ ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಆಗ್ರಾದಿಂದ ಮಥುರಾಕ್ಕೆ ಅವರು ಪ್ರಯಾಣ ಬೆಳೆಸಿದ್ದರು. ಮಥುರಾ ಜಂಕ್ಷನ್ ನಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯುವ ಧಾವಂತದಲ್ಲಿ ಅವರು ಆಯತಪ್ಪಿ ಹಳಿಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin