ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ, ಲೂಟಿ

ಈ ಸುದ್ದಿಯನ್ನು ಶೇರ್ ಮಾಡಿ

Rape-02

ನವದೆಹಲಿ, ನ.20-ಚಲಿಸುತ್ತಿರುವ ರೈಲಿನಲ್ಲಿ ದರೋಡೆ, ಸುಲಿಗೆ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವಾಗಲೇ, ಮಹಿಳೆಯೊಬ್ಬಳ ಮೇಲೆ ದರೋಡೆಕೋರನೊಬ್ಬ ರೇಪ್ ಮಾಡಿ, ಚಿನ್ನಾಭರಣಗಳನ್ನು ದೋಚಿರುವ ಘಟನೆ ಶಹದಾರ ಮತ್ತು ಹಳೆ ದೆಹಲಿ ರೈಲ್ವೆ ನಿಲ್ದಾಣಗಳ ನಡುವೆ ನಡೆದಿದೆ.  ಸ್ಥಳೀಯ ಪ್ರಯಾಣಿಕರ ರೈಲಿನ ಮಹಿಳಾ ಭೋಗಿಯಲ್ಲೇ ನಿನ್ನೆ ಈ ದುಷ್ಕøತ್ಯ ನಡೆದಿದೆ. ಶಹದಾರ ರೈಲ್ವೆ ನಿಲ್ದಾಣದಲ್ಲಿ ಈ ಬೋಗಿಯಲ್ಲಿದ್ದ ನಾಲ್ವರು ಮಹಿಳೆಯರು ಇಳಿದರು. ಕೌಟುಂಬಿಕ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ತೆರಳಲು ಬಿಹಾರದ 32 ವರ್ಷದ ಮಹಿಳೆ ಏಕಾಂಗಿಯಾಗಿ ಪ್ರಯಾಣ ಮುಂದುವರಿಸಿದ್ದರು. ಆಗ ಬೋಗಿಯೊಳಗೆ ನುಗ್ಗಿದ ಮೂವರು ದರೋಡೆಕೋರರಲ್ಲಿ ಇಬ್ಬರು ಆಕೆಯ ಬಳಿಯಿದ್ದ ಬ್ಯಾಗ್‍ನನ್ನು ಕಸಿದುಕೊಂಡು ಪರಾರಿಯಾದರು.

ಆದರೆ, ಅಲ್ಲೇ ಉಳಿದ ಇನ್ನೊಬ್ಬ ದುಷ್ಕರ್ಮಿ ಮಹಿಳೆಯನ್ನು ಥಳಿಸಿ ಅತ್ಯಾಚಾರ ಎಸಗಿದ ಅದೇ ವೇಳೆ ಬೋಗಿಯೊಳಗೆ ಪ್ರವೇಶಿಸಿದ ಇಬ್ಬರು ಪೊಲೀಸ್ ಪೇದೆಗಳು ಅತ್ಯಾಚಾರ ಆರೋಪಿ ಶಹಬಾಜ್‍ನನ್ನು ಬಂಧಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin