ಚಳಿಗಾಲಕ್ಕೂ ಫ್ಯಾಷನ್ ಉಡುಪು

ಈ ಸುದ್ದಿಯನ್ನು ಶೇರ್ ಮಾಡಿ

Fation-002

ಚಳಿಗಾಲಕ್ಕೆ ಹಾಗೂ ಹುಡುಗಿಯರ ಫ್ಯಾಷನ್ ಹುಚ್ಚಿಗೆ ಒಗ್ಗಿಕೊಳ್ಳುವ ಬೆಚ್ಚನೆಯ ಉಡುಗೆಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಿಸಿಬಿಸಿಯಾಗಿ ಬಿಕರಿಯಾಗುತ್ತಿವೆ. ಕೇಪ್ರೀಸ್, ಜೀನ್ಸ್, ಮಿನಿಸ್ಕರ್ಟ್ ಹಾಕಿಕೊಂಡು ಸ್ಲೀವ್‍ಲೆಸ್, ಬ್ಯಾಕ್‍ಲೆಸ್ ಟಾಪ್‍ಗಳನ್ನು ಧರಿಸಿ ರೋಡ್‍ನಲ್ಲಿ ರಾಕ್ ಮಾಡೋ ಬೆಡಗಿಯರಿಗೆ ಚಳಿಗಾಲ ಬಂತೆಂದರೆ ಉಡುಪುಗಳದ್ದೇ ಪ್ರಾಬ್ಲಂ. ಮೈಮುಚ್ಚುವ ಬಟ್ಟೆಗಳನ್ನು ಉಡುವ ಮನಸ್ಸಿಲ್ಲ ಹಾಗಂತ ಆಕರ್ಷಕವಾಗಿ ಕಾಣಲು ಇಷ್ಟದ ಶಾರ್ಟ್ ಬಟ್ಟೆಗಳನ್ನು ಹಾಕಿಕೊಂಡರೆ ಮೈ ಕೊರೆಯುವ ಚಳಿ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಇತ್ತೀಚಿನ ದಿನಗಳಲ್ಲಿ ಚಳಿಗಾಲಕ್ಕೆಂದೇ ಒಂದಿಷ್ಟು ಸ್ಟೈಲ್, ಫ್ಯಾಷನೇಬಲ್ ಉಡುಪುಗಳು ಮಾರುಕಟ್ಟೆಗೆ ಬರುತ್ತಿವೆ. ಈ ಚಳಿಗಾಲದಲ್ಲಿ ಫ್ಯಾಷನ್ ಉಡುಪುಗಳನ್ನು ತೊಡುವ ಹುಡುಗಿಯರ ಆಸೆಯನ್ನು ನಿರಾಸೆಗೊಳಿಸದೆ, ಫ್ಯಾಷನ್ ಜೊತೆ ದೇಹಕ್ಕೆ ಬೆಚ್ಚನೆಯ ಸ್ಪರ್ಶ ನೀಡುವಲ್ಲಿ ಹಲವು ಬಗೆಯ ಶಾಲ್‍ಗಳು, ಸ್ಕಾರ್ಪ್‍ಗಳು ಸಹಕಾರಿಯಾಗುತ್ತಿವೆ.

ಹಿಂದಿನ ಕಾಲದಲ್ಲಿ ಉಣ್ಣೆಯ ಬಟ್ಟೆ ಸ್ವೆಟರ್ಸ್, ಬಾರ್ಡರ್ ಪ್ರಿಂಟೆಂಡ್ ಶಾಲ್‍ಗಳು ಚಳಿಗಾಲ ಬಂದಾಗ ತಮ್ಮ ಬೇಡಿಕೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದವು. ಆದರೆ ಅವುಗಳ ಜಾಗದಲ್ಲಿ ಬಗೆಬಗೆಯ ಶಾಲ್‍ಗಳು, ಸ್ಕಾರ್ಪ್‍ಗಳು ಬೇಡಿಕೆಯಲ್ಲಿದ್ದು, ಚಳಿಗಾಲದಲ್ಲಿಯೇ ಹೆಚ್ಚು ಬಗೆಯ ವಿನ್ಯಾಸಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಕಾರಣ ಇಷ್ಟೇ ಮೊದಲು ಇವು ಚಳಿಗಾಲದಲ್ಲಿ ಬೆಚ್ಚಗಿರಿಸಲು ಮಾತ್ರ ಬಳಕೆಯಾಗುತ್ತಿದ್ದವು. ಆದರೆ ಇಂದು ಇವು ಫ್ಯಾಷನ್ ಆಗಿಬಿಟ್ಟಿವೆ. ಮೈತುಂಬ ಬಟ್ಟೆ ಧರಿಸಿ, ಮೇಲೆ ಕತ್ತಿಗೆ ಒಂದು ಸ್ಟೈಲಿಶ್ ಸ್ಕಾರ್ಪ್ ಧರಿಸಿದರೆ ನಿಮ್ಮ ಲುಕ್ಕೇ ಚೇಂಜ್ ಆಗುತ್ತೆ. ಹಾಗೇ ನೀವು ಸ್ಲೀವ್‍ಲೆಸ್, ಬ್ಯಾಕ್‍ಲೆಸ್ ಟಾಪ್‍ಗಳನ್ನು ಧರಿಸುವ ಇಚ್ಚೆಯುಳ್ಳವರಾಗಿದ್ದರೆ ಮೇಲೆ ಒಂದು ಫ್ಯಾಷನೇಬಲ್ ಶಾಲ್ ಹಾಕಿಕೊಳ್ಳುವುದು ಸೂಕ್ತ. ಏಕೆಂದರೆ ಮೈಕೊರೆಯುವ ಚಳಿಯಲ್ಲಿ ಮೈತೋರಿಸುವ ನಿಮ್ಮ ಬಟ್ಟೆಗಳಿಂದ ಉಂಟಾಗುವ ಚಳಿಗೆ ಮೇಲೆ ಬಳಸುವ ಶಾಲ್ ನಿಮ್ಮನ್ನು ಬೆಚ್ಚಗಿಡುತ್ತದೆ. ಹಾಗೆ ನಿಮ್ಮ ಫ್ಯಾಷನೇಬಲ್ ಉಡುಗೆ ಹುಡುಗರಿಗೆ ಪ್ರಚೋದನೆ ನೀಡದಂತಿರಲಿ.

► Follow us on –  Facebook / Twitter  / Google+

Facebook Comments

Sri Raghav

Admin