ಚಳ್ಳಕೆರೆಯಲ್ಲಿ ಹಾಲಿ ಶಾಸಕ ಟಿ.ರಘುಮೂರ್ತಿ ಜಯಭೇರಿ

ಈ ಸುದ್ದಿಯನ್ನು ಶೇರ್ ಮಾಡಿ

Raghumurty--01

ಚಳ್ಳಕೆರೆ, ಮೇ 15- ಚಳ್ಳಕೆರೆ ಎಸ್‍ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಟಿ.ರಘುಮೂರ್ತಿ ಅವರು 13,805 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ.   ಕ್ಷೇತ್ರದ ಮತದಾರರು ಕೊನೆಗೂ ಅಭಿವೃದ್ಧಿಯ ಕಡೆಗೆ ಕೈ ಹಿಡಿದಿದ್ದು, ಎರಡನೆ ಬಾರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.  [ #ಕನ್ನಡಿಗರ ತೀರ್ಪು : ಕರ್ನಾಟಕ ವಿಧಾನಸಭಾ ಚುನಾವಣೆ -2018 ಫಲಿತಾಂಶ (Live) ]

ಕಾಂಗ್ರೆಸ್‍ನಿಂದ ರಘುಮೂರ್ತಿ, ಜೆಡಿಎಸ್‍ನಿಂದ ರವೀಶ್, ಬಿಜೆಪಿಯಿಂದ ಕುಮಾರಸ್ವಾಮಿ ಕಣದಲ್ಲಿದ್ದು, ಕಾಂಗ್ರೆಸ್‍ನ ರಘುಮೂರ್ತಿ 71,970, ಜೆಡಿಎಸ್‍ನ ರವೀಶ್ 58,165, ಬಿಜೆಪಿಯ ಕುಮರಸ್ವಾಮಿ 32,805 ಮತಗಳನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುತ್ತವೆ ಎನ್ನುವುದಕ್ಕೆ ರಘುಮೂರ್ತಿ ಅವರೇ ಉದಾಹರಣೆ ಎಂದು ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

Facebook Comments

Sri Raghav

Admin