ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಭಾರತ ಆಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ

ಈ ಸುದ್ದಿಯನ್ನು ಶೇರ್ ಮಾಡಿ

BCCI--01

ನವದೆಹಲಿ, ಮೇ 8– ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ವಿರುದ್ಧ ಆಡಬೇಕೇ ಬೇಡವೇ ಎಂಬ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತ್‍ಚೌದರಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡಿದ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಚೌದರಿ ಮೇಲಿನಂತೆ ಪ್ರತಿಕ್ರಿಯಿಸಿದರು. ಪ್ರಸ್ತುತ ಪಾಕಿಸ್ತಾನ ನಿಯಮಗಳನ್ನು ಮೀರಿ ಭಾರತದ ವಿರುದ್ಧ ಸಮರ ಸಾರಿರುವ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಜೂನ್ 4 ರಂದು ತನ್ನ ಮೊದಲ ಪಂದ್ಯವನ್ನು ಆಡಬೇಕಾಗಿದೆ ಆದರೆ ಭಾರತ ಪಾಕ್ ವಿರುದ್ಧ ಆಡಬೇಕೋ ಬೇಡವೋ ಎಂಬ ನಿರ್ಧಾರ ಪ್ರಧಾನಿ ಮೋದಿಯವರಿಗೆ ಬಿಟ್ಟ ವಿಷಯ ಎಂದು ಅವರು ತಿಳಿಸಿದ್ದಾರೆ. 

2008ರಲ್ಲಿ ಮುಂಬೈ ದಾಳಿಯ ಸಂದರ್ಭದಲ್ಲಿ ಉಗ್ರಗಾಮಿಗಳ ದಾಳಿಯಿಂದಾಗಿ ಎರಡು ತಂಡಗಳ ನಡುವಿನ ಸರಣಿಯು ರದ್ದಾಗಿತ್ತಾದರೂ 2012ರಲ್ಲಿ ಎರಡು ಟ್ವೆಂಟಿ- 20 ಹಾಗೂ ಮೂರು ಏಕದಿನ ಸರಣಿಯನ್ನು ಆಯೋಜಿಸಲಾಗಿತ್ತಾದರೂ ಕದನ ಉಲ್ಲಂಘನೆ ಸಂಬಂಧ ಆ ಸರಣಿಯನ್ನು ಕೈಬಿಡಲಾಯಿತು.  ಐಪಿಎಲ್ ಅಧ್ಯಕ್ಷ , ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿ, ನಮ್ಮ ತಂಡವು ಪಾಕಿಸ್ತಾನ ವಿರುದ್ಧ ಪಾಕ್‍ನಲ್ಲಿ ಬಿಟ್ಟು ಬೇರೆ ತಟಸ್ಥ ಸ್ಥಳದಲ್ಲಿ ಆಡಲು ಸಿದ್ಧ. ಈ ಹಿಂದೆ ಜಿಂಬಾಬ್ವೆಯಲ್ಲಿ ನಡೆದ ಸರಣಿಯಲ್ಲೂ ಪಾಕ್‍ನೊಂದಿಗೆ ಭಾರತ ಸೆಣಸಿತ್ತು ಆದರೆ ಭದ್ರತೆಯು ಆಟಗಾರರ ಹಿತರಕ್ಷಣೆ ಕಾಯುವಂತಿದ್ದರೆ ಮಾತ್ರ ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಣಸಲು ಸಿದ್ಧ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin