ಚಾಂಪಿಯನ್ಸ್ ಟ್ರೋಫಿಯಿಂದಲೂ ಕೆ.ಎಲ್.ರಾಹುಲ್ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

kl-rahul

ನವದೆಹಲಿ, ಏ. 21- ಭುಜದ ಗಾಯದ ಸಮಸ್ಯೆಯಿಂದ ನರಳುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ಅವರು ಜೂನ್‍ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.  ಆಸ್ಟ್ರೇಲಿಯಾದ ಸರಣಿಯ ವೇಳೆ ಗಾಯದ ಸಮಸ್ಯೆಯಿಂದ ಬಳಲಿದರೂ ಕೂಡ ಸರಣಿಯಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂದು ಗುರುತಿಸಿಕೊಂಡರು. ಟೆಸ್ಟ್ ಸರಣಿಯ ನಂತರ ಐಪಿಎಲ್‍ನ ಎಲ್ಲಾ ಪಂದ್ಯಗಳಿಂದಲೂ ಹೊರಗುಳಿದಿರುವ ರಾಹುಲ್ ಈಗ ಚಾಂಪಿಯನ್ಸ್ ಲೀಗ್‍ನಲ್ಲೂ ಪಾಲ್ಗೊಳ್ಳುವುದು ಅನುಮಾನವಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ರಾಹುಲ್, ನಾನು ಚಾಂಪಿಯನ್ಸ್ ಲೀಗ್‍ನಲ್ಲಿ ಪಾಲ್ಗೊಳ್ಳಲು ಬಹಳ ಉತ್ಸುಕನಾಗಿದ್ದೇ ಆದರೆ ವೈದ್ಯರ ಸಲಹೆಯ ಮೇಲೆ ನಾನು ಆ ಸರಣಿಯಲ್ಲಿ ಪಾಲ್ಗೊಳ್ಳುವ ಛಾನ್ಸ್ ತೀರಾ ಕಡಿಮೆ ಇದೆ ಎಂದರು.ನಾನು ಕ್ರಿಕೆಟ್ ಅಂಗಳಕ್ಕೆ ಇಳಿದು 3 ವರ್ಷಗಳಾಗಿವೆ. ಈ ವೇಳೆ ನಾನು ಗಾಯದ ಸಮಸ್ಯೆಯಿಂದ ಅನೇಕ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದು ಇನ್ನು ಮುಂದೆ ಇಂತಹ ಸಮಸ್ಯೆಗಳಿಂದ ದೂರ ಉಳಿಯಲು ಯೋಚಿಸಿದ್ದು ಕ್ರಿಕೆಟ್‍ನಲ್ಲಿ ನನ್ನ ಮುಂದಿನ ಜೀವನದತ್ತ ಹೆಚ್ಚು ಚಿತ್ತ ಹರಿಸುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin