ಚಾಂಪಿಯನ್ ಟ್ರೋಫಿ : ಭಾರತದ ಮುಂದಿದೆ 5 ಪ್ರಮುಖ ಸವಾಲುಗಳು

ಈ ಸುದ್ದಿಯನ್ನು ಶೇರ್ ಮಾಡಿ

Team-India--01

ಐಸಿಸಿ ಹಾಗೂ ಬಿಸಿಸಿಐ ನಡುವಿನ ಹಗ್ಗಜಗ್ಗಾಟದ ನಡುವೆಯೂ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಬೇಕೆಂದು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರು ಆಗ್ರಹಿಸಿರುವ ಬೆನ್ನಲ್ಲೇ ಮೇ 7 ರಂದು ತಂಡವನ್ನು ಪ್ರಕಟಿಸುವ ಸಾಧ್ಯತೆ ದಟ್ಟವಾಗಿದೆ.  ಆದರೆ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡುವ ಮುನ್ನ ಬಿಸಿಸಿಐ ಮುಂದೆ ಟಾಪ್ 5 ಸವಾಲುಗಳು ಎದುರಾಗಿದೆ.

ಓಪನಿಂಗ್ ಸಮಸ್ಯೆ:

ಇಂಗ್ಲೆಂಡ್ ವಿರುದ್ಧದ ನಡೆದ ಇತ್ತೀಚೆಗೆ ಸರಣಿಯಲ್ಲಿ ಆರಂಭಿಕ ಆಟಗಾರರ ಸಮಸ್ಯೆಯನ್ನು ಅನುಭವಿಸಿದ ಭಾರತಕ್ಕೆ ಚಾಂಪಿಯನ್‍ಟ್ರೋಫಿಯಲ್ಲೂ ಅದೇ ರಾಗ ಮುಂದುವರೆದಿದೆ. ಕೆ.ಎಲ್.ರಾಹುಲ್ ಇನ್ನೂ ಚೇತರಿಕೆ ಕಾಣದಿರುವುದರಿಂದ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಜೊತೆಗೆ ಶಿಖರ್ ಧವನ್ ಅಥವಾ ಅಜೆಂಕ್ಯಾರಹಾನೆಯನ್ನು ಆಯ್ಕೆ ಮಾಡುವ ಪರಿಸ್ಥಿತಿ ಇದೆ. ಆದರೆ ಐಪಿಎಲ್‍ನಲ್ಲಿ ಆರಂಭಿಕ ಆಟಗಾರರಾಗಿ ಮಿಂಚಿರುವ ಶಿಖರ್ ಧವನ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪದೇ ಪದೇ ಎಡವುತ್ತಿದ್ದರೆ, ರಹಾನೆ ಪ್ರಸಕ್ತ ಐಪಿಎಲ್‍ನಲ್ಲಿ ಆರಂಭಿಕ ಆಟಗಾರನಾಗಿ ಸಂಪೂರ್ಣವಾಗಿ ಎಡವಿದ್ದಾರೆ.ರಿಷಭ್‍ಪಂತ್ ಆಯ್ಕೆ:

ಮಹೇಂದ್ರ ಸಿಂಗ್ ಧೋನಿಯೊಂದಿಗೆ ಹೆಚ್ಚುವರಿ ವಿಕೆಟ್ ಕೀಪರ್ ರೂಪದಲಿ ಡೆಲ್ಲಿಡೇರ್‍ಡೆವಿಲ್ಸ್‍ನ ವಿಕೆಟ್ ಕೀಪರ್ ರಿಷಭ್‍ಪಂತ್‍ರ ಆಯ್ಕೆ ಮಾಡಲು ಯೋಚಿಸಲಾಗಿದೆ ಆದರೆ ಒಂದೇ ಪಂದ್ಯದಿಂದ ರಿಷಭ್‍ನ ಸಾಮಥ್ರ್ಯವನ್ನು ಅಳೆಯಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.

ಶಮಿಗೆ ಸ್ಥಾನ:

2015ರ ವಿಶ್ವಕಪ್‍ನ ನಂತರ ಭಾರತ ತಂಡದಿಂದ ದೂರ ಉಳಿದಿರುವ ಮೊಹಮ್ಮದ್ ಶಮಿಯನ್ನು ಹೆಚ್ಚುವರಿ ವೇಗದ ಬೌಲರ್ ಆಗಿ ತಂಡದಲ್ಲಿ ಸ್ಥಾನ ಕಲ್ಪಿಸುವುದು. ತಂಡದಲ್ಲಿ ಈಗಾಗಲೇ ಭುವನೇಶ್ವರ್‍ಕುಮಾರ್, ಜಸ್‍ಪ್ರೀತ್ ಬೂಮ್ರಾ, ಉಮೇಶ್‍ಯಾದವ್ ಹಾಗೂ ಹಾರ್ದಿಕ್ ಪಾಂಡ್ಯಾ ಕೂಡ ಇಂಗ್ಲೆಂಡ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ. ಆದರೆ ತಂಡದಲ್ಲಿ ಹೆಚ್ಚುವರಿ ಬೌಲರ್ ರೂಪದಲ್ಲಿ ಸ್ಥಾನ ಪಡೆಯಲು ಹಂಬಲಿಸುತ್ತಿರುವ ಮೊಹಮ್ಮದ್ ಶಮಿ ಐಪಿಎಲ್‍ನಲ್ಲಿ ಮಿಂಚದಿರುವುದು ಆಯ್ಕೆ ಮಂಡಳಿಗೆ ತಲೆನೋವಾಗಿದೆ.

ಲೆಗ್‍ಸ್ಪಿನ್ನರ್‍ಗಳ ತಲೆನೋವು:

ಇಂಗ್ಲೆಂಡ್ ಪಿಚ್‍ಗಳು ಸ್ಪಿನ್ನರ್‍ಸ್ನೇಹಿ ಎಂಬುದು ಇತ್ತೀಚಿನ ಪಂದ್ಯಗಳು ತೋರಿಸಿವೆ. ಇಂಗ್ಲೆಂಡ್ ತಂಡದಲ್ಲಿರುವ ಟ್ರೆಂಡ್‍ವೇಲ್ ಹಾಗೂ ಅದಿಲ್ ರಶೀದ್ ಅವರ ಪ್ರದರ್ಶನದಿಂದಲೇ ಇಂಗ್ಲೆಂಡ್ ಗೆದ್ದಿದೆ. ಆದರೆ ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್, ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರೆ, ಹೆಚ್ಚುವರಿ ಸ್ಪಿನ್ನರ್ ರೂಪದಲ್ಲಿ ಅಮಿತ್‍ಮಿಶ್ರಾ, ಕುಲ್‍ದೀಪ್‍ಯಾದವ್, ಯಜುವೇಂದ್ರ ಚಾಹಲ್ ಇವರಲ್ಲಿ ಯಾರಿಗೆ ಸ್ಥಾನ ಕಲ್ಪಿಸಬೇಕೆಂದು ಕೂಡ ಸವಾಲಾಗಿ ಪರಿಣಮಿಸಿದೆ.

ಐಪಿಎಲ್ ವೀರರು:

ಐಪಿಎಲ್ 10ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಬಿನ್ ಉತ್ತಪ್ಪ (ಕೆಕೆಆರ್), ರಾಹುಲ್ ತ್ರಿಪಾಠಿ (ಆರ್‍ಪಿಎಸ್) ತನ್ನ ಬೌಲಿಂಗ್ ಚಮತ್ಕಾರದಿಂದ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್‍ದಾಹಕ್ಕೆ ಕಡಿವಾಣ ಹಾಕುತ್ತಿರುವ ಜಯದೇವ್ ಉನ್ಕಟ್‍ರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಬೇಕೆ ಎಂಬುದು ಕೂಡ ಬಿಸಿಸಿಐ ಮುಂದೆ ಯಕ್ಷಪ್ರಶ್ನೆಯಾಗಿ ಉಳಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin