ಚಾಕುವಿನಿಂದ ಗೆಳತಿಗೆ 17 ಬಾರಿ ಇರಿದ ಪ್ರಿಯಕರ..!

ಈ ಸುದ್ದಿಯನ್ನು ಶೇರ್ ಮಾಡಿ

17-Times

ಗೋದಾವರಿ, (ಆಂಧ್ರಪ್ರದೇಶ), ಜ.10– ತನ್ನ ಗೆಳತಿ ಬೇರೊಬ್ಬನ ಜೊತೆ ಫೋನ್‍ನಲ್ಲಿ ಸಂಭಾಷಣೆ ನಡೆಸಿದ್ದಕ್ಕಾಗಿ ಕುಪಿತಗೊಂಡ ಯುವಕನೊಬ್ಬ 17 ಬಾರಿ ಚಾಕುವಿನಿಂದ ಇರಿದು ಆಕೆಯನ್ನು ತೀವ್ರ ಗಾಯಗೊಳಿಸಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ನಿನ್ನೆ ನಡೆದಿದೆ.  ಈ ಕೃತ್ಯದ ನಂತರ ಆಕೆಯ ಗೆಳೆಯ ತಾನೇ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಯುವತಿ ಸ್ಥಿತಿ ಗಂಭೀರವಾಗಿದೆ.

ಚಂದ್ರಶೇಖರ್ ಎಂಬಾತ ನಿನ್ನೆ ಮಧ್ಯಾಹ್ನ ತನ್ನ ಗೆಳತಿಯನ್ನು ದಾರಿಯಲ್ಲಿ ಅಡ್ಡಗಟ್ಟಿ. ಆಕೆ ಬೇರೊಬ್ಬನ ಜೊತೆ ನಡೆಸಿದ ಸಂಭಾಷಣೆಯ ಧ್ವನಿಮುದ್ರಿತ ವಿವರವನ್ನು ತೋರಿಸಿ ಜಗಳ ತೆಗೆದ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಆತ ಯುವತಿಗೆ 17 ಬಾರಿ ಚಾಕುವಿನಿಂದ ಇರಿದ. ಬಳಿಕ ತಾನೂ ಅದೇ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ. ಸಾರ್ವಜನಿಕರು ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರು. ಚಂದ್ರಶೇಖರ್ ಅಪಾಯದಿಂದ ಪಾರಾಗಿದ್ದಾನೆ. ಆದರೆ ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟೌನ್ ಸರ್ಕಲ್ ಇನ್ಸ್‍ಪೆಕ್ಟರ್ ಪಿ.ಎಸ್.ರಾವ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin