ಚಾಕು ತೋರಿಸಿ ಮಾಂಗಲ್ಯ ಸರ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

Chain

ದಾವಣಗೆರೆ, ಅ.4- ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಒಂಟಿ ಮಹಿಳೆಗೆ ದರೋಡೆಕೋರರು ಚಾಕು ತೋರಿಸಿ 30 ಗ್ರಾಂ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಗಳೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಜಗಳೂರು ತಾಲೂಕಿನ ಚೆಟ್ಟಿಗೆರೆ ಗ್ರಾಮದ ನಿವಾಸಿ ಅಕ್ಕಮ್ಮ (46) ಮಾಂಗಲ್ಯಸರ ಕಳೆದುಕೊಂಡ ಮಹಿಳೆ.ಅಕ್ಕಮ್ಮ ಪಟ್ಟಣದ ಹೊರವಲಯದಲ್ಲಿ ಹನುಮಂತಾಪುರ ರಸ್ತೆಯ ಪಕ್ಕದಲ್ಲಿರುವ ತಮ್ಮ ತೋಟದಲ್ಲಿ ಒಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಅದೇ ರಸ್ತೆಯಿಂದ ಬಂದ ಮೂವರು ಬೈಕ್‍ದಾರಿಗಳು ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿ ಹೂ ಖರೀದಿಸುವ ನೆಪದಲ್ಲಿ ಬಂದು ಮಹಿಳೆಗೆ ಚಾಕು ತೋರಿಸಿ ಬೆದರಿಸಿ 80 ಸಾವಿರ ಬೆಲೆಬಾಳುವ 30 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

 

 

► Follow us on –  Facebook / Twitter  / Google+

Facebook Comments

Sri Raghav

Admin