ಚಾಮರಾಜನಗರ KSRTC ಡಿಪೋದ ಬೀರುವಿನಲ್ಲಿ ಭದ್ರವಾಗಿದ್ದ 28ಲಕ್ಷ ಮಂಗಮಾಯ..!

ಈ ಸುದ್ದಿಯನ್ನು ಶೇರ್ ಮಾಡಿ

Depot

ಚಾಮರಾಜನಗರ, ಅ.17-ಇಲ್ಲಿನ ಕೆಎಸ್ಆಿರ್ಟಿದಸಿ ಡಿಪೋದ ಬೀರುವಿನಲ್ಲಿದ್ದ 28 ಲಕ್ಷ ರೂಪಾಯಿ ದಿಢೀರ್ ಮಂಗಮಾಯವಾಗಿದೆ. ಇಬ್ಬರು ಭದ್ರತಾ ಸಿಬ್ಬಂದಿಗಳಿದ್ದರೂ ಬೀರುವಿನಲ್ಲಿದ್ದ 28ಲಕ್ಷ ರೂ. ನಾಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೀಗ ಜಡಿದ ಬೀರುವಿನಲ್ಲಿದ್ದ ಹಣವನ್ನು ಸಿಬ್ಬಂದಿಗಳೇ ಅಪಹರಿಸಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ನಡೆದದ್ದೇನು?

KSRTC ಡಿಪೋದಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷ ರೂ. ಹಣ ಸಂಗ್ರಹವಾಗುತ್ತದೆ. ಶನಿವಾರ ಮತ್ತು ಭಾನುವಾರ ರಜೆ ಇದ್ದ ಕಾರಣ ಅಲ್ಲಿನ ಸಿಬ್ಬಂದಿಗಳು ಮೂರು ದಿನಗಳಲ್ಲಿ ಸಂಗ್ರಹವಾದ 28 ಲಕ್ಷ ರೂ.ಗಳನ್ನು ಬೀರುವಿನಲ್ಲಿಟ್ಟಿದ್ದರು.  ಇಂದು ಮುಂಜಾನೆ ಬೀರು ತೆಗೆದಾಗ ಅದರಲ್ಲಿದ್ದ ಹಣ ನಾಪತ್ತೆಯಾಗಿರುವುದು ಕುತೂಹಲ ಕೆರಳಿಸಿದೆ. 10 ಲಕ್ಷ ಹಣ ಸಂಗ್ರಹವಾದಾಗ ಡಿಪೋಗೆ ಪೊಲೀಸ್ ಭದ್ರತೆ ಪಡೆಯುವುದು ವಾಡಿಕೆ. ಆದರೆ 28 ಲಕ್ಷ ರೂ. ಸಂಗ್ರಹವಾಗಿದ್ದರೂ ಪೊಲೀಸ್ ಭದ್ರತೆ ಪಡೆಯದಿರುವುದು ಹಾಗೂ ಸಿಸಿ ಕ್ಯಾಮೆರಾ ಅಳವಡಿಸದಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಅನುಮಾನ ಮೂಡಿಸಿದೆ.

ಡಿಪೊೀ ಪ್ರವೇಶಿಸಲು ಯಾರಿಗೂ ಅನುಮತಿ ಇಲ್ಲ. ಕೇವಲ ಇಲಾಖಾ ಸಿಬ್ಬಂದಿಗಳು ಮಾತ್ರ ಪ್ರವೇಶಿಸಬಹುದು. ಇಷ್ಟೆಲ್ಲಾ ಇದ್ದರೂ ಹಾಕಿದ ಬೀಗ ಹಾಗೇ ಇರುವಾಗ ಒಳಗಡೆ ಇದ್ದ 28 ಲಕ್ಷ ಹಣ ಮಂಗಮಾಯವಾಗಿರುವುದು ಸ್ಥಳೀಯ ಸಿಬ್ಬಂದಿಗಳ ಕೈವಾಡದತ್ತ ಬೆರಳು ಮಾಡುತ್ತಿವೆ. 28 ಲಕ್ಷ ರೂ. ಹಣ ಸಂಗ್ರಹವಾದರೂ ಪೊಲೀಸ್ ಭದ್ರತೆ ಪಡೆಯದ ಡಿಪೋ ಡಿಎಸ್ಐ ರವೀಂದ್ರ ಅವರ ವೈಫಲ್ಯ ಎದ್ದು ಕಾಣುತ್ತಿದೆ.  ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಗಂಗಾಧರಸ್ವಾಮಿ, ಇನ್ಸ್ಪೆಾಕ್ಟರ್ಗ ಳಾದ ಶ್ರೀಕಾಂತ್ ಮತ್ತು ಎಂ.ನಾಯಕ್ಪ್ರ ಕರಣ ದಾಖಲಿಸಿಕೊಂಡು ಕಳ್ಳರ ಬಂಧನಕ್ಕೆ ಕ್ರಮಕೈಗೊಂಡಿದ್ದಾರೆ.

KSRTC

Facebook Comments

Sri Raghav

Admin