ಚಾಮರಾಜೇಂದ್ರ ಮೃಗಾಲಯಕ್ಕೆ ಬಂದ ಹೊಸ ಅತಿಥಿ

ಈ ಸುದ್ದಿಯನ್ನು ಶೇರ್ ಮಾಡಿ

shgsdfhadfh

ಮೈಸೂರು, ಆ.7- ಇಲ್ಲಿನ ಚಾಮರಾಜೇಂದ್ರ ಮೃಗಾಲಯಕ್ಕೆ ಹೊಸ ಅತಿಥಿಯೊಬ್ಬರು ಆಗಮಿಸಿದ್ದಾರೆ.  ಗುಜರಾತಿನ ಜೂನ್‍ಗಢ್‍ನಲ್ಲಿರುವ ಸಕ್ಕರ್‍ಬರ್ಗ ಮೃಗಾಲಯದಿಂದ ರಣೀತ ಹೆಸರಿನ 6 ವರ್ಷದ ಸಿಂಹಣಿಯನ್ನು ಚಾಮರಾಜೇಂದ್ರ  ಮೃಗಾಲಯಕ್ಕೆ ತರಲಾಗಿದೆ. ರಣೀತಾಳನ್ನು 4-5 ದಿನಗಳ ನಂತರ ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಗುಜರಾತ್‍ನಿಂದ ಆಗಮಿಸಿರುವುದರಿಂದ ಪ್ರಯಾಣದ ಬಳಲಿಕೆಯ ಹಿನ್ನೆಲೆಯಲ್ಲಿ 4-5 ದಿನಗಳವರೆಗೂ ರಣೀತಳಿಗೆ ವಿಶ್ರಾಂತಿ ನೀಡಿ. ನಂತರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಚಾಮರಾಜೇಂದ್ರ ಮೃಗಾಲಯದಿಂದ ಸಕ್ಕರಬರ್ಗ ಮೃಗಾಲಯಕ್ಕೆ ತೋಳ ಹಾಗೂ 4 ಪಕ್ಷಿಗಳನ್ನು ನೀಡಿ, ಪ್ರತಿಯಾಗಿ ರಣೀತಳನ್ನು ಕರೆತರಲಾಗಿದೆ.

Facebook Comments

Sri Raghav

Admin