ಚಾಮರಾಜೇಶ್ವರ ರಥಕ್ಕೆ ಬೆಂಕಿ ಹಚ್ಚಿದ ಶಂಕಿತ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Chamarajnagar-01

ಚಾಮರಾಜನಗರ,ಫೆ.23-ಇಲ್ಲಿನ ಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ತಡರಾತ್ರಿ ಶಂಕಿತ ಆರೋಪಿ ಕುಮಾರ್(40) ಎಂಬುವನನ್ನು ಬಂಧಿಸಿದ್ದಾರೆ. ಶಂಕಿತ ಆರೋಪಿ ಕುಮಾರ್ ಚಾಮರಾಜನಗರದ ಉಪ್ಪಾರ ಬಡಾವಣೆ ನಿವಾಸಿಯಾಗಿದ್ದು , ಈ ಹಿಂದೆಯೂ ಆದಿಶಕ್ತಿ ಗೋದಾಮಿಗೆ ಬೆಂಕಿ ಹಚ್ಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಅಂಗಡಿಯೊಂದರಲ್ಲಿ ಕಳ್ಳತನವನ್ನು ಕೂಡ ಮಾಡಿದ ಆರೋಪ ಈ ಕುಮಾರ್ ಮೇಲಿದೆ. ಕುಮಾರ್‍ನನ್ನು ಅವನ ಸ್ನೇಹಿತರು ಹಾಫ್ ಮೆಂಟಲ್ ಎಂದೇ ಕರೆಯುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ತಿಂಗಳ 18ರಂದು ಚಾಮರಾಜೇಶ್ವರ ದೇವಸ್ಥಾನದ ಐತಿಹಾಸಿಕ ಚಾಮರಾಜೇಶ್ವರನ ತೇರಿಗೆ ಬೆಂಕಿ ಹಚ್ಚುವ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಿಸಿಟಿವಿಯಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ನಿನ್ನೆ ರಾತ್ರಿ ಕುಮಾರ್‍ನನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ತೋರಿಗೆ ಬೆಂಕಿ ಹಚ್ಚಿದ ಪ್ರಕರಣದ ಹಿನ್ನೆಲೆಯಲ್ಲಿ ಫೆ.19ರಂದು ಚಾಮರಾಜನಗರ ಬಂದ್ ಕರೆಯಲಾಗಿತ್ತು. ಈ ಬಂದ್ ಆಚರಣೆಗೆ ಸಾರ್ವಜನಿಕರು ಸಾಕಷ್ಟು ಬೆಂಬಲ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin