ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಸೋಲು ಗ್ಯಾರಂಟಿ : ಶ್ರೀನಿವಾಸ್ ಪ್ರಸಾದ್

ಈ ಸುದ್ದಿಯನ್ನು ಶೇರ್ ಮಾಡಿ

Srinivas-Prasad-and-Siddara

ಮೈಸೂರು, ಏ.3-ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸುವುದು ನಿಶ್ಚಿತ ಎಂದು ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಅವರನ್ನು ಹೇಗೆ ಸೋಲಿಸಬೇಕೆಂಬ ರಣತಂತ್ರವನ್ನು ಮಾಡಲಾಗುತ್ತಿದೆ. ಅವರನ್ನು ಹೇಗೆ ಸೋಲಿಸುತ್ತೇವೆ ಎಂಬ ಗುಟ್ಟನ್ನು ಈಗಾಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. ಒಟ್ಟಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸುವುದು ಖಚಿತ ಎಂದು ಹೇಳಿದರು.

750 ಕೆಜಿ ತೂಕದ ಸೇಬಿನ ಹಾರ ಹಾಕಿಸಿಕೊಳ್ಳುವ ಸಿದ್ದರಾಮಯ್ಯ ಸಮಾಜವಾದಿಯೇ ಎಂದು ಪ್ರಶ್ನಿಸಿದ ಅವರು, ಯಾರಾದರು ನೂರಾರು ಕೆಜಿ ಚಿನ್ನದ ಹಾರ ಹಾಕಿದರೆ ಸಿದ್ದರಾಮಯ್ಯ ಹಾಕಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು. ನನ್ನ ಸ್ವಾಭಿಮಾನದ ಹಿನ್ನೆಲೆಯಲ್ಲಿ ಪುಸ್ತಕ ಬರೆದಿದ್ದೆ. ಪ್ರಮುಖರು ಯಾರು ಪುಸ್ತಕ ಓದಿಲ್ಲ. ಓದಿ ಮಾತನಾಡಬೇಕಿತ್ತು. ಉಪಚುನಾವಣೆಯಲ್ಲಿ ಅಕ್ರಮವಾಗಿದ್ದರೆ ಕೋರ್ಟ್‍ಗೆ ಹೋಗಬೇಕಿತ್ತು ಎಂದಿದ್ದಾರೆ. ನನ್ನ ಉದ್ದೇಶ ಕೋರ್ಟ್‍ಗೆ ಹೋಗುವುದು ಅಲ್ಲ. ಅವರು, ಉಪಚುನಾವಣೆಯಲ್ಲಿ ಏನು ಮಾಡಿದ್ದಾರೆ ಎಂಬುವುದು ಜನತಾ ನ್ಯಾಯಾಲಯದ ಮುಂದೆ ಇಡಬೇಕಾಗಿದ್ದು, ಅದಕ್ಕಾಗಿ ಈ ಪುಸ್ತಕ ಬರೆದಿದ್ದೇನೆ ಎಂದು ಹೇಳಿದರು.

ತಾತ್ಸಾರ, ಉಡಾಫೆ ಮಾತುಗಳನ್ನೇ ಹಾಡುತ್ತಾ ಇದ್ದಾರೆ. ಉಡಾಫೆ ಮತ್ತು ಫಲಾಯನ ಮಾಡುವುದೇ ಸಿದ್ದರಾಮಯ್ಯನವರ ಚಾಳಿ ಎಂದು ದೂರಿದರು. ನನ್ನ ರಾಜಕೀಯ ಜೀವನದಲ್ಲಿ ಸಹಾಯ ಪಡೆದವರು ಯಾರು ನನ್ನ ಮನಸ್ಸಿಗೆ ನೋವುಂಟು ಮಾಡಿರಲಿಲ್ಲ. ಆದರೆ, ಸಿದ್ದರಾಮಯ್ಯನವರು ನನಗೆ ತುಂಬಾ ನೋವುಂಟು ಮಾಡಿದ್ದಾರೆ ಎಂದರು.ಜಯಚಾಮರಾಜೇಂದ್ರ ಪ್ರತಿಮೆ ನಿರ್ಮಾಣ ಸ್ಥಾಪನೆಗೆ ಒತ್ತಾಯ ಮಾಡಿದ್ದು ನಾನು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin