ಹುಂಡಿಯ ಮೇಲೆ ಮಂಗಳಾರತಿ ತಟ್ಟೆ ಇಟ್ಟು ಕಾಣಿಕೆ ದೋಚುತ್ತಿದ್ದ ಪರಿಚಾರಕ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Chamundi-Temple--02
ಮೈಸೂರು,ಜ.13-ಭಕ್ತಾದಿಗಳು ಹುಂಡಿಗೆ ಕಾಣಿಕೆ ಹಾಕದಂತೆ ಹುಂಡಿಯ ಮೇಲೆ ಮಂಗಳಾರತಿ ತಟ್ಟೆ ಇಟ್ಟು ಹಣ ಪಡೆಯುತ್ತಿದ್ದ ಚಾಮುಂಡೇಶ್ವರಿ ದೇವಸ್ಥಾನದ ಪರಿಚಾರಕ ಎನ್.ಶ್ರೀನಿವಾಸ್‍ಎಂಬುವರನ್ನು ಜಿಲ್ಲಾಧಿಕಾರಿ ರಂದೀಪ್‍ರವರು ಸೇವೆಯಿಂದ ಅಮಾನತು ಮಾಡಿದ್ದಾರೆ. ಜ.8ರಂದು ಜಿಲ್ಲಾಧಿಕಾರಿ ಈ ಅಮಾನತು ಆದೇಶ ಹೊರಡಿಸಿದ್ದು, ದೇವಾಲಯದ ಮುಖ್ಯ ಹುಂಡಿ ಮೇಲೆ ಮಂಗಳಾರತಿ ತಟ್ಟೆಯಿಟ್ಟು ಹುಂಡಿಯ ಮೇಲೆ ಕೈಯನ್ನು ಚಾಚಿ ಕಾಣಿಕೆ ಹಣ ಹುಂಡಿಗೆ ಬೀಳದಂತೆ ತಡೆಯುತ್ತಿದ್ದರಿಂದ ಈತನನ್ನು ಅಮಾನತು ಮಾಡಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin