ಚಾಯ್ ವಾಲಾನ ಬಳಿ 400 ಕೋಟಿ ರೂ ಹಣ, ದರ್ಜಿ ಬಳಿ 2.5 ಕೆಜಿ ಚಿನ್ನ ಪತ್ತೆ ..!

ಈ ಸುದ್ದಿಯನ್ನು ಶೇರ್ ಮಾಡಿ

Chai-Wla-01

ಸೂರತ್, ಡಿ.18-ಈತ ಬೀದಿಯಲ್ಲಿ ಟೀ ಮಾರುವ ವ್ಯಕ್ತಿ.. ಆತನ ಬಳಿ ಪತ್ತೆಯಾಗಿದ್ದು 400 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಗ-ನಾಣ್ಯ..! ಸೂರತ್‍ನ ಚಾಯ್‍ವಾಲಾ ಕಿಶೋರ್ ಭಯ್ಯಾವಾಲಾ ಬಳಿ ಪತ್ತೆಯಾದ ಭಾರೀ ಪ್ರಮಾಣದ ಅಕ್ರಮ ನಗದು, ಚಿನ್ನದ ಬಿಸ್ಕತ್ತು, ಚಿನ್ನಾಭರಣಗಳು ಮತ್ತು ಆಸ್ತಿ-ಪಾಸ್ತಿಯನ್ನು ನೋಡಿ ಆದಾಯ ತೆರಿಗೆ ಅಧಿಕಾರಿಗಳೇ ದಂಗಾಗಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳು ದೇಶಾದ್ಯಂತ ತೀವ್ರಗೊಳಿಸಿರುವ ದಾಳಿಯಲ್ಲಿ ಸಿಕ್ಕಬಿದ್ದ ದೊಡ್ಡ ದೊಡ್ಡ ಕುಳಗಳಲ್ಲಿ ಈ ಚಾಯ್‍ವಾಲಾ ಹುಬ್ಬೇರುವಂತೆ ಮಾಡಿದ್ದಾನೆ.  ಹೆಸರಿಗೆ ಟೀ ಮಾಡುತ್ತಿದ್ದ ಕಿಶೋರ್ ತೆರೆಮರೆಯಲ್ಲಿ ದೊಡ್ಡ ಫೈನಾನ್ಷಿಯರ್, ಬಡ್ಡಿ ವ್ಯವಹಾರಸ್ಥ ಮತ್ತು ರಿಯಲ್ ಎಸ್ಟೇಟ್ ದಂಧೆಕೋರನೂ ಆಗಿದ್ದ ಸಂಗತಿ ತನಿಖೆ ವೇಳೆ ಬಯಲಾಗಿದೆ.

ಆತನ ಪುಟ್ಟ ಟೀ ಅಂಗಡಿ ಮತ್ತು ಮನೆ ಮೇಲೆ ನಡೆದ ದಾಳಿ ನಡೆಸಿದ ಐಟಿ ಅಧಿಕಾರಿಗಳು ಆರಂಭದಲ್ಲೇ ಇಷ್ಟು ದೊಡ್ಡ ಮೊತ್ತದ ನಗ-ನಾಣ್ಯ ಜಪ್ತಿ ಮಾಡಿದ್ದು, ಇನ್ನಷ್ಟು ಅಕ್ರಮ-ಅವ್ಯವಹಾರಗಳನ್ನು ಕೆದಕುತ್ತಿದ್ದಾರೆ.

 ದರ್ಜೆ ಬಳಿ 2.5 ಕೆಜಿ ಚಿನ್ನ : ಇದೇ ವೇಳೆ ಚಂಡೀಗಢದಲ್ಲಿ ಟೈಲರ್ ಮನೆ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳಿಗೆ ಇನ್ನೊಂದು ಅಚ್ಚರಿ ಕಾದಿತ್ತು. ಆತನ ಬಳಿ 18 ಲಕ್ಷ ರೂ. ಹೊಸ ಕರೆನ್ಸಿ ಸೇರಿದಂತೆ 33 ಲಕ್ಷ ರೂ. ನೋಟು ಪತ್ತೆಯಾಯಿತು. ಅಲ್ಲದೇ 2.5 ಕೆ.ಜಿ. ಚಿನ್ನ ಕೂಡ ಇತ್ತು. ದರ್ಜಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ.  ನೋಟು ರದ್ದತಿ ನಂತರ ಕಾಳಧನಿಕರ ಜೊತೆಗೆ ಶ್ರಮಿಕ ವರ್ಗದ ಜನರಲ್ಲೂ ಭಾರೀ ಮೊತ್ತದ ಹಣ ಪತ್ತೆಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin