ಚಾರ್ಮುಡಿ ಘಾಟ್‍’ನಲ್ಲಿ ಬೆಂಕಿಬಿದ್ದು ನೂರಾರು ಎಕರೆ ಅರಣ್ಯಸಂಪತ್ತು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಚಿಕ್ಕಮಗಳೂರು,ಮಾ.1- ಚಾರ್ಮುಡಿ ಘಾಟ್‍ನ ಶೋಲಾ ಅರಣ್ಯ ಪ್ರದೇಶಕ್ಕೆ ಹೊತ್ತಿಕೊಂಡಿರುವ ಕಾಡ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.  ಮೂಡಿಗೆರೆ ತಾಲ್ಲೂಕಿನ ಸೋಮನಕಾಡು, ಮಲಯ ಮಾರುತ ಸುತ್ತಲಿನ ಅರಣ್ಯ ಪ್ರದೇಶಕ್ಕೆ ಹಬ್ಬಿರುವ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದೆರಡು ದಿನಗಳಿಂದ ಹರಸಾಹಸ ಪಡುತ್ತಿದ್ದರೂ ಸಂಪೂರ್ಣವಾಗಿ ಶಮನಗೊಳಿಸಲು ಸಾಧ್ಯವಾಗಿಲ್ಲ.  ಮತ್ತೊಂದೆಡೆ ಬೆಂಕಿಯಿಂದಾಗಿ ದಟ್ಟ ಹೊಗೆಯು ಆವರಿಸಿರುವುದರಿಂದ ಸ್ಥಳೀಯರು, ಪ್ರವಾಸಿಗರು ಪರದಾಡುತ್ತಿದ್ದಾರೆ. ನೂರಾರು ಎಕರೆ ಅರಣ್ಯದಲ್ಲಿನ ಅಮೂಲ್ಯ ಗಿಡಮೂಲಿಕೆಗಳು, ಬೃಹತ್ ಗಾತ್ರದ ಮರಗಳು ಜತೆಗೆ ವಿವಿಧ ಜೀವ ಸಂಕುಗಳು ಬೆಂಕಿಗೆ ಆಹುತಿಯಾಗಿವೆ. ಕಾಡುಪ್ರಾಣಿಗಳು , ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ.

ಈ ಚಾರ್ಮುಡಿ ಘಾಟ್‍ನಲ್ಲಿ ಅತ್ಯಮೂಲ್ಯವಾದ ಗಿಡಮೂಲಿಕೆ ಸಸ್ಯಗಳು ಇದ್ದವು. ಇದೀಗ ಕಾಡ್ಗಿಚ್ಚಿನಿಂದ ಅವುಗಳು ಸುಟ್ಟು ಕರಕಲಾಗಿವೆ.  ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಹಬ್ಬಿರುವ ಕಾಡ್ಗಿಚ್ಚನ್ನು ನಂದಿಸಲು ಇಂದೂ ಸಹ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಒಟ್ಟಾರೆ ಯಾರೋ ಕಿಡಿಗೇಡಿಗಳ ಕೃತ್ಯದಿಂದ ನೂರಾರು ಎಕರೆ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ.

Facebook Comments

Sri Raghav

Admin