ಚಾಲಕನಿಗೆ ಖಾರದಪುಡಿ ಎರಚಿ ಲಾರಿ ಕದ್ದು ಪರಾರಿ : ನಾಲ್ವರು ಕಳ್ಳರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

KOLARA
ಕೋಲಾರ, ಫೆ.25- ಚಾಲಕನಿಗೆ ಖಾರದಪುಡಿ ಎರಚಿ ಲಾರಿ ಕದ್ದು ಪರಾರಿಯಾಗಿದ್ದ ನಾಲ್ವರು ದರೋಡೆಕೋರರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.ನಗರದ ನಿವಾಸಿಗಳಾದ ಸೈಯದ್ ಮುಷ್ತಿಕ್ ಅಹಮದ್, ಆಜಿಲ್ ಪಾಷ, ಸೈಯದ್ ಹುಸೇನ್, ಸೈಯದ್ ತಬೀರ್ ಬಂಧಿತ ಆರೋಪಿಗಳು.ಕಳೆದ ಫೆ.16ರಂದು ಚಾಲಕ ಜಫರ್ ಸಾಧಿಕ್ ರಾಷ್ಟ್ರೀಯ ಹೆದ್ದಾರಿಯ ಅರಾಬಿಕೊತ್ತನೂರು ಸಮೀಪ ಲಾರಿಯಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿದ ನಾಲ್ವರು ದರೋಡೆಕೋರರು, ಲಾರಿ ನಿಲ್ಲಿಸಿ ಚಾಲಕನಿಗೆ ಖಾರದಪುಡಿ ಎರಚಿ ಲಾರಿ ಕದ್ದು ಪರಾರಿಯಾಗಿದ್ದರು.ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಕೋರರ ಪತ್ತೆಗಾಗಿ ಸಿಪಿಐ ಓಬಳ್ ರೆಡ್ಡಿ, ಪಿಎಸ್‍ಐಗಳಾದ ಶಿವರಾಜ್, ಕೃಷ್ಣಮೂರ್ತಿ, ಸಿಬ್ಬಂದಿಗಳಾದ ಬಾಬು, ವೆಂಕಟಾಚಲಪತಿ, ಮಂಜುನಾಥ್, ನಾಗರಾಜ್, ಪ್ರಕಾಶ್, ಶಿವಕುಮಾರ್, ಮುನಿರಾಜು ಹಾಗೂ ಚಿಕ್ಕ ಆಂಜನಪ್ಪ ಅವರ ತಂಡ ತನಿಖೆ ಕೈಗೊಂಡು ಮೇಲಿನ ನಾಲ್ವರು ಆರೋಪಿಗಳನ್ನು ಬಂಧಿಸಿ, ಲಾರಿಯನ್ನು ವಶಪಡಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin