ಚಾಲಕನ ನಿಯಂತ್ರಣ ತಪ್ಪಿ ವಾಹನ ಹೊಂಡಕ್ಕೆ ಬಿದ್ದು 17 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಕೊಡಗು, ಜೂ. 3- ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ಚಾಲಕ ಸಾವನ್ನಪ್ಪಿ 17 ಮಂದಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗಾವಿಯಿಂದ ಕುಕ್ಕೆಗೆ ವಾಹನದಲ್ಲಿ ಸುಮಾರು 20 ಮಂದಿ ತೆರಳುತ್ತಿದ್ದು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೋವರ ಕೊಲ್ಲಿಯ ತಿರುವಿನಲ್ಲಿ ಹೊಂಡಕ್ಕೆ ಬಿದಿದ್ದೆ.ವಾಹನದಲ್ಲಿ ಚಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೆಸರು ವಿಳಾಸ ತಿಳಿದು ಬಂದಿಲ್ಲ, 17ಮಂದಿಗೆ ಸಣ್ಣಪ್ಟು ಗಾಯಗಳಾಗಿದ್ದು ಗಾಯಾಳುಗಳನ್ನು ಸೋಮವಾರಪೇಟೆಯ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಗ್ನಿ ಶಾಮಕ ದಳದವರ ಸಹಾಯದಿಂದ ಹೊಂಡಕ್ಕೆ ಬಿದ್ದಿವರನ್ನು ಹೊರತೆಗೆಯಲಾಯಿತು.  ಈ ಸಂಬಂಧ ಸೋಮವಾರ ಪೇಟೆ vಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

Facebook Comments