ಚಿಂತಾಮಣಿಯಲ್ಲಿ 8 ವರ್ಷದ ಬಾಲಕಿಯ ರೇಪ್ ಅಂಡ್ ಮರ್ಡರ್

ಈ ಸುದ್ದಿಯನ್ನು ಶೇರ್ ಮಾಡಿ

Rape-Adn-Murder

ಚಿಂತಾಮಣಿ, ಆ.24- ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಂಬಾಜಿದುರ್ಗ ಹೋಬಳಿಯ ಬಾರಪ್ಪಲ್ಲಿಯಲ್ಲಿನ ಮನೆಯೊಂದರಲ್ಲಿ ರಾತ್ರಿ ಮಲಗಿದ್ದ 8 ವರ್ಷದ ಬಾಲಕಿಯನ್ನು ರಾತ್ರಿ ಮನೆಯಿಂದ ಎಳೆದೊಯ್ದಿದ್ದ ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿ ಗ್ರಾಮದ ಹೊರವಲಯದಲ್ಲಿ ಬಿಸಾಡಿದ್ದಾರೆ.

ಬೆಳಗ್ಗೆ ಬಾಲಕಿ ಕಾಣದಿದ್ದರಿಂದ ಗಾಬರಿಗೊಂಡ ಪೋಷಕರು ಮನೆಯ ಸುತ್ತಮುತ್ತೆಲ್ಲ ಹುಡುಕಾಡಿದ್ದಾರೆ. ಸುಳಿವು ಸಿಗದೆ ಪರದಾಡುತ್ತಿದ್ದ ಪೋಷಕರಿಗೆ ಗ್ರಾಮದ ಹೊರವಲಯದಲ್ಲಿ ಬಾಲಕಿಯ ಶವ ಸಿಕ್ಕಿದ ಬಗ್ಗೆ ಮಾಹಿತಿ ದೊರೆತು ಅಲ್ಲಿಗೆ ತೆರಳಿದಾಗ ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ಕಾರ್ತಿಕ್‍ರೆಡ್ಡಿ ಹಾಗೂ ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin