ಚಿಂದಿ ಆಯುವವರಿಬ್ಬರ ನಡುವೆ ನಡೆದ ಹಣಕಾಸಿನ ಜಗಳ ಕೊಲೆಯಲ್ಲಿ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Murder-01

ಬೆಂಗಳೂರು, ಫೆ.6– ಹಣಕಾಸಿನ ವಿಚಾರಕ್ಕೆ ಚಿಂದಿ ಆಯುವವರಿಬ್ಬರ ನಡುವೆ ನಡೆದ ಜಗಳ ಒಬ್ಬನ ಕೊಲೆ ಯಲ್ಲಿ ಅಂತ್ಯವಾದ ಘಟನೆ ಯಶವಂತಪುರ ಠಾಣೆ ವ್ಯಾಪ್ತಿ ಯಲ್ಲಿ ನಡೆದಿದೆ. ಆದಿ (35) ಕೊಲೆಯಾದವ. ಸ್ನೇಹಿತ ತಾಜನ್(26) ಆರೋಪಿ. ಇಬ್ಬರು ಸ್ನೇಹಿತರಾಗಿದ್ದು, ಜೊತೆಯಲ್ಲೇ ಚಿಂದಿ ಆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚಿಂದಿ ಆಯ್ದು ಮಾರಾಟ ಮಾಡಿದ ಹಣವನ್ನು ಆದಿ ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದು, ತಾಜನ್‍ಗೆ ಹಣ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ಎಸ್‍ಬಿಎಂ ಕಾಲೋನಿ 8ನೆ ಕ್ರಾಸ್‍ನಲ್ಲಿ ರಾತ್ರಿ 11.30ರ ಸುಮಾರಿನಲ್ಲಿ ಇಬ್ಬರ ನಡುವೆ ಜಗಳ ಆರಂಭವಾಗಿದೆ.

ಒಂದು ಹಂತದಲ್ಲಿ ತಾಜನ್ ಸಿಮೆಂಟ್ ಇಟ್ಟಿಗೆಯಿಂದ ಆದಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿ ತಾಜನ್‍ನನ್ನು ಬಂಧಿಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ.   ಯಶವಂತಪುರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin