ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

Sidda-elepphant

ಮಾಗಡಿ, ಅ.22- ರಸ್ತೆ ದಾಟುವಾಗ ಚರಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದ ಸಿದ್ಧ ಎಂಬ ಆನೆ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆನೆ ಈಗ ತಜ್ಞರ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಹೊರ ರಾಜ್ಯದಿಂದ ಬಂದಿರುವ ಆನೆ ತಜ್ಞರ ತಂಡ ಅರವಳಿಕೆ ನೀಡಿ ಚಿಕಿತ್ಸೆ ಆರಂಭಿಸಿದ್ದಾರೆ. ದುಬಾರೆ ಕ್ಯಾಂಪ್‍ನಿಂದ ಸಾಕಾನೆಗಳಾದ ಗಜೇಂದ್ರ ಮತ್ತು ಹರ್ಷನ ಸಹಾಯದಿಂದ ಅವ್ವೇರಹಳ್ಳಿ ಸಮೀಪದ ಗುಂಡಿಯಲ್ಲಿ ಸಿಲುಕಿಕೊಂಡಿದ್ದ ಸಿದ್ದನನ್ನು ಬಯಲು ಪ್ರದೇಶಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

ಅಸ್ಸೋಂ ಮೂಲದ ಕುಶಾಲ್‍ಶರ್ಮ ಹಾಗೂ ಸಿಕ್ಕಿಂನ ಅರುಣ್‍ಚಕಾರ್ಯ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಪ್ರಕಾರ ಚಿಕಿತ್ಸೆಗೆ ಆನೆ ಸ್ಪಂದಿಸುತ್ತಿದ್ದು, ಶೀಘ್ರ ಗುಣಮುಖವಾಗುವ ಲಕ್ಷಣಗಳು ಕಾಣುತ್ತಿವೆ.

► Follow us on –  Facebook / Twitter  / Google+

Sidda-elephant-1

Facebook Comments

Sri Raghav

Admin