ಚಿಕ್ಕಪೇಟೆ ಶಾಸಕ ದೇವರಾಜ್ ಒಡೆತನದ ಕಟ್ಟಡ ಒಡೆಯಲು ಅನುಮತಿ

ಈ ಸುದ್ದಿಯನ್ನು ಶೇರ್ ಮಾಡಿ

RCD

ಬೆಂಗಳೂರು, ಆ.20- ನಗರದ ಪ್ರತಿಷ್ಠಿತ ಸಿದ್ದಯ್ಯ ರಸ್ತೆಯಲ್ಲಿರುವ ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಪಾಲುದಾರಿಕೆಯ ಪೈ ವೈಭವ್ ಕಟ್ಟಡದ ಒತ್ತುವರಿ ತೆರವನ್ನು ಸೋಮವಾರದಿಂದ ಕೈಗೆತ್ತಿಕೊಳ್ಳಲಾಗುವುದು ಎಂದು ಕಾರ್ಯಪಾಲಕ ಅಭಿಯಂತರ ಮಂಜುನಾಥರೆಡ್ಡಿ ತಿಳಿಸಿದ್ದಾರೆ. ಸಿದ್ದಯ್ಯ ರಸ್ತೆಯಲ್ಲಿ ಶಾಸಕ ಆರ್.ವಿ.ದೇವರಾಜ್ ಸೇರಿದಂತೆ ನಾಲ್ಕು ಮಂದಿ ಪಾಲುದಾರಿಕೆಯ ಪೈ ವೈಭವ್ ಆರು ಅಂತಸ್ತಿನ ಕಟ್ಟಡ 33 ಅಡಿ ರಾಜಕಾಲುವೆಯಲ್ಲಿ 5 ಅಡಿ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ.   600 ಚದರಡಿ ಜಾಗದಲ್ಲಿ ಅಡುಗೆ ಮನೆ, 20 ಕೊಠಡಿಗಳು ಒಂದು ಪವರ್ ಸ್ಟೇಷನ್ ಹಾಗೂ ಒಂದು ವಾಟರ್ ಟ್ಯಾಂಕ್ ನಿರ್ಮಿಸಿದ್ದಾರೆ. ಅವರು ಒತ್ತುವರಿ ಮಾಡಿರುವುದನ್ನು ಸಂಪೂರ್ಣವಾಗಿ ತೆರವುಗೊಳಿಸುತ್ತೇವೆ. ಡೈಮಂಡ್ ಕಟಿಂಗ್ ಮಿಷನ್ ತರಿಸುತ್ತಿದ್ದೇನೆ. ಇದು ಒತ್ತುವರಿಯಾಗಿರುವ ಕಟ್ಟಡದ ಭಾಗವನ್ನಷ್ಟೇ ತೆರವು ಮಾಡುತ್ತದೆ ಎಂದು ತಿಳಿಸಿದರು.

ಸ್ವಯಂ ತೆರವು:

ಸಿದ್ದಯ್ಯ ರಸ್ತೆಯಲ್ಲಿರುವ ಶಬರಿ ರೆಸಿಡೆನ್ಸಿಯವರು ರಾಜಕಾಲವೆ ಒತ್ತುವರಿ ಮಾಡಿಕೊಂಡಿದ್ದು ತಾವಾಗಿಯೇ ತೆರವು ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರೆಸೆಡಿನ್ಸಿ ಮಾಲೀಕ ರಾಜು ಅವರು 15 ವರ್ಷಗಳಿಂದ ನಾನು ಇಲ್ಲಿ ಬಿಸಿನೆಸ್ ಮಾಡುತ್ತಿದ್ದೇನೆ.  ಒಂದು ವರ್ಷದ ಹಿಂದೆಯಷ್ಟೇ ಇಲ್ಲಿ ಬಿಲ್ಡಿಂಗ್ ಖರೀದಿಸಿದೆ. ಆಗ ದಾಖಲೆ ಸರಿಯಾಗಿತ್ತು. ಬಿಬಿಎಂಪಿಯವರೇ ಎಲ್ಲ ಮಾಡಿಕೊಟ್ಟರು. ಈಗ ಒತ್ತುವರಿಯಾಗಿದೆ ಎಂದು ಅವರೇ ಹೇಳುತ್ತಿದ್ದಾರೆ. ಏನು ಮಾಡಲಿ ಎಂದು ಅಸಹಾಯಕತೆ ಪ್ರದರ್ಶಿಸಿದರು.  ನಾವೇ ತೆರವು ಮಾಡುತ್ತಿದ್ದೇವೆ ಬಿಲ್ಡಿಂಗ್ ತಗೊಂಡಾಗ ಕಷ್ಟಪಟ್ಟಿದ್ದೆವು. ಈಗ ಒಡೆಯಬೇಕು ಎಂದರೆ ಕಣ್ಣಲ್ಲಿ ರಕ್ತ ಬರುತ್ತದೆ ಎಂದರು. ಸರ್ಕಾರವೇ ಒಂದು ಕಾನೂನು ಕೋಶ ರಚನೆ ಮಾಡಿ ವಕೀಲರನ್ನು ನೇಮಿಸಲಿ.

ಯಾವುದು ಕಾನೂನು ಬಾಹಿರ,ಯಾವುದು ಒತ್ತುವರಿಯಾಗಬಾರದು ಎಂಬ ಸಲಹೆ ಕೊಟ್ಟರೆ ಅದರಂತೆ ಮುಂದುವರೆಯಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು. ಕೆಲವು ಖಾಸಗಿಯವರು ಕಾನೂನು ಬಾಹಿರವಾಗಿರೋದನ್ನು ಕಾನೂನುಬದ್ದ ಎಂದು ಸರ್ಟಿಫೈ ಮಾಡುತ್ತಾರೆ. ಇಂತಹದು ನಡೆಯದಂತೆ ಸರ್ಕಾರ ಕಾನೂನು ಕೋಶ ರಚಿಸಲಿ ಎಂದು ಮನವಿ ಮಾಡಿದರು. ಆರ್.ಆರ್.ನಗರದಲ್ಲಿ ಮುಂದುವರೆದ ಕಾರ್ಯಾಚರಣೆ: ನಿನ್ನೆ ಆರ್.ಆರ್.ನಗರದ ಬೆಮೆಲ್ ಬಡಾವಣೆಯಲ್ಲಿ ನಾಲ್ಕು ಕಟ್ಟಡಗಳನ್ನು ತೆರವುಗೊಳಿಸಿದ್ದ ಬಿಬಿಎಂಪಿ ಇಂದು ಉಳಿದ ಒತ್ತುವರಿ ತೆರವು ಕಾರ್ಯವನ್ನು ಚುರುಕುಗೊಳಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin