ಚಿಕ್ಕಬಳ್ಳಾಪುರ : ತರಬೇತಿ ಕೇಂದ್ರದಲ್ಲಿ ಬೆಂಕಿ, 30 ಲಕ್ಷ ಮೌಲ್ಯದ ಕಂಪ್ಯೂಟರ್ ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

chikkanbalalr--01

ಚಿಕ್ಕಬಳ್ಳಾಪುರ,ಸೆ.24-ನಗರದ ಬಿ.ಬಿ.ರಸ್ತೆಯಲ್ಲಿರುವ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಮಾರು 30 ಲಕ್ಷ ಮೌಲ್ಯದ ಕಂಪ್ಯೂಟರ್‍ಗಳು ಸುಟ್ಟು ಭಸ್ಮವಾಗಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ರಾಜೇಶ್ವರಿ ಹಾಗೂ ಮಹೇಶ್ ದಂಪತಿಗೆ ಸೇರಿದ ಎನ್‍ಐಸಿಟಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಇಂದು ಮುಂಜಾನೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಅಂಗಡಿಯೆಲ್ಲಾ ವ್ಯಾಪಿಸಿ ಅಲ್ಲಿದ್ದ 24 ಕಂಪ್ಯೂಟರ್‍ಗಳು, ಪೀಠೋಪಕರಣಗಳು ಸುಟ್ಟುಹೋಗಿವೆ.

WhatsApp Image 2017-09-24 at 9.41.05 AM

ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕೆಳ ಮಹಡಿಯಲ್ಲಿ ಬೇಕರಿ ಹಾಗೂ ಎಂಎಸ್‍ಐಎಲ್ ಚಿಟ್ ಫಂಡ್ ಕಚೇರಿಗಳಿವೆ. 2ನೇ ಮಹಡಿಯಲ್ಲಿ ಕಂಪ್ಯೂಟರ್ ಕೇಂದ್ರವಿದ್ದು ,ಶಾರ್ಟ್ ಸಕ್ರ್ಯೂಟ್‍ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2017-09-24 at 9.41.08 AM

WhatsApp Image 2017-09-24 at 9.41.05 AM(1)

Facebook Comments

Sri Raghav

Admin