ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆ ಸಾರ್ವಜನಿಕರ ಪಾಲಿಗೆ ನರಕಸದೃಶ್ಯ

ಈ ಸುದ್ದಿಯನ್ನು ಶೇರ್ ಮಾಡಿ

CB-Pura
ಚಿಕ್ಕಬಳ್ಳಾಪುರ, ಮೇ 8- ಸ್ಟೆತಸ್ಕೋಪ್ ಹಿಡಿದ ವೈದ್ಯ ಮಾನವೀಯತೆ ಮರೆತರೆ? ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆ ರೋಗಿಗಳಿಂದ ಹಣ ಪಡೆಯುವುದರಲ್ಲಿ ಖಾಸಗಿ ಆಸ್ಪತ್ರೆಗಿಂತ ಒಂದು ಕೈ ಮೇಲು…!  ಹೌದು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಒಂದಿಲ್ಲೊಂದು ರೀತಿಯ ಅವ್ಯವಸ್ಥೆಗಳು ನಡೆಯುತ್ತಲೇ ಇವೆ. ಇಲ್ಲಿ ಹಣವಿದ್ದರಿಗೆ ಒಂದು ರೀತಿ, ಹಣವಿಲ್ಲದ ರೋಗಿಗಳನ್ನು ನೋಡುವುದೇ ಮತ್ತೊಂದು ರೀತಿ ಎಂಬಂತಾಗಿದೆ ಎನ್ನುವುದು ಸಾರ್ವಜನಿಕರ ಆಕ್ರೋಶ.  ಕೆಲವು ವೈದ್ಯರು ರೋಗಿ ಮತ್ತು ರೋಗಿಯ ಜೊತೆ ಸೌಜನ್ಯತೆಯಿಂದ ನಡೆದುಕೊಳ್ಳುವ ವ್ಯವದಾನವನ್ನೇ ಕಳೆದುಕೊಂಡ ಕಾರಣ ಕ್ಷುಲ್ಲಕ ವಿಚಾರದಲ್ಲೂ ದೊಡ್ಡ ವ್ಯಾಜ್ಯ ನಡೆಯುವಂತಾಗಿದೆ.

 

ಹೀಗಾಗಿ ಸರ್ಕಾರಿ ಜಿಲ್ಲಾಸ್ಪತ್ರೆ ಸಾರ್ವಜನಿಕರ ಪಾಲಿಗೆ ನರಕಸದೃಶ್ಯವಾಗಿದೆ.   ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಅತ್ಯಂತ ಬಡವರೇ ಬರುವ ಸರ್ಕಾರಿ ಆಸ್ಪತ್ರೆಯಲ್ಲಿ ದುಡ್ಡಿಲ್ಲದೆ ರೋಗಿಯನ್ನು ಸ್ಟೆತಸ್ಕೋಪ್ ಇಡುವುದಿರಲಿ, ನೋಡಲೂ ಸಹಾ ಇವರಿಗೆ ಆಲಸ್ಯವೇ ಸರಿ. ಬಹುತೇಕ ವೈದ್ಯರು ಹಣಪೀಕುವ ಆಸ್ಪತ್ರೆ ಎಂಬ ಅಪವಾದ ಒಂದೆಡೆ ಕಾಡುತ್ತಲೆ ಇದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿನಲ್ಲಿ ಕರ್ತವ್ಯನಿರತ ವೈದ್ಯ ನಡೆದುಕೊಂಡ ರೀತಿಯೇ ವಿಚಿತ್ರಕ್ಕೆ ಸಾಕ್ಷಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin