ಚಿಕ್ಕಮಗಳೂರು : ಕಾಫಿ ತೋಟಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

jungle--elephat

ಚಿಕ್ಕಮಗಳೂರು, ಅ.25- ಕಾಫಿ ತೋಟಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯಿಂದ ಆಗುತ್ತಿರುವ ಫಸಲು ನಾಶ ತಡೆಗಟ್ಟಲು ಅರಣ್ಯ ಇಲಾಖೆ ಕೂಡಲೇ ಆನೆಗಳನ್ನು ಸ್ಥಳಾಂತರಿಸಬೇಕೆಂದು ಕರ್ನಾಟಕ ಬೆಳೆಗಾರರ ಸಂಘದ ನೂತನ ಅಧ್ಯಕ್ಷ ಡಾ.ಮನಯ್ಯಪಾಂಡ ಎಂ.ಚಂಗಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಕಾಡಿನಲ್ಲಿರುವ ಆನೆಗಳಿಗೆ ಆಹಾರ ಒದಗಿಸಬೇಕು. ಅವುಗಳಿಗೆ ಕಾಡಿನಲ್ಲಿ ಅಗತ್ಯವಿರುವ ಆಹಾರ ಸಿಗದ ಕಾರಣ ಆಹಾರ ಅರಸಿ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಹಾಗಿದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಕಾಫಿ ಬೆಳೆಗಾರರಿಗೆ ಸೊಸೈಟಿಗಳಲ್ಲಿ ಶೇ.3ರ ಬಡ್ಡಿ ದರದಲ್ಲಿ 3 ಲಕ್ಷ ರೂ. ಸಾಲ ನೀಡುತ್ತಿದ್ದು, ಅದನ್ನು 10 ರಿಂದ 25 ಲಕ್ಷದವರೆಗೆ ವಿಸ್ತರಿಸಬೇಕು. ಕಾಫಿ ಬೆಳೆಗಾರರಿಗೆ ಪ್ರತಿ ಎಕರೆಗೆ 60 ಸಾವಿರ ರೂ.ಖರ್ಚು ಬರುವುದರಿಂದ ಇದನ್ನು ಸರಿದೂಗಿಸಲು ಇಂತಹ ಕ್ರಮ ಅಗತ್ಯ. ಕೇಂದ್ರ ಸರ್ಕಾರಕ್ಕೆ ಕೆಪಿಎ ಮೂಲಕ ಕಾಫಿ ಬೆಳೆದು ಕ್ಯೂರ್ ಮಾಡಿ ಮಾರಾಟ ಮಾಡಿದರೆ ಬಂದ ವರಮಾನದಲ್ಲಿ ಶೇ.25ರಷ್ಟು ತೆರಿಗೆ ನೀಡಬೇಕೆಂದು ಹೇಳಿದೆ. ಅದಕ್ಕಾಗಿ ವರಮಾನ ಕಾಯ್ದೆ ತಿದ್ದುಪಡಿ ತಂದು ಬೆಳೆಗಾರರಿಗೆ ನೆರವಾದರೆ ತೋಟದ ಬ್ರ್ಯಾಂಡ್ ಮಾರುಕಟ್ಟೆ ಮಾಡಬಹುದು. ಇದರಿಂದ ಸಾರ್ವಜನಿಕರಿಗೆ ಒಳ್ಳೆಯ ಕಾಫಿ ಮತ್ತು ಒಳ್ಳೆಯ ಬೆಳೆ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ಸಹಾಯ ಧನ ಮತ್ತು ಸಾಲ ಒದಗಿಸಬೇಕು. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯ ಒಟ್ಟಾರೆ ಬೆಳೆಯಲ್ಲಿ ಶೇ.70ರಷ್ಟನ್ನು ರಫ್ತು ಮಾಡಲಾಗುತ್ತದೆ. ದೇಶದಲ್ಲಿ ಕಾಫಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಆಂತರಿಕ ಬಳಕೆ ಹೆಚ್ಚಿಸಬಹುದು. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಪೆÇ್ರೀತ್ಸಾಹ ನೀಡಬೇಕು ಎಂದರು.ಕಾಫಿ ಸಂಸ್ಕರಣೆಯಿಂದ ಕಾಫಿ ಕ್ಯೂರಿಂಗ್ ಮಾಡುವವರಿಗೆ ಜಿಎಸ್‍ಪಿಯಿಂದ ಹೊರಗಿಡಬೇಕು. ಕಾಫಿ ಬೀಜವನ್ನು ಉರಿದು ಪುಡಿ ಮಾಡಿ ಮಾರಾಟ ಮಾಡುವವರಿಗೆ ಜಿಎಸ್‍ಪಿಗೆ ಒಳಪಡಿಸಬೇಕು. ವರಮಾನ ತೆರಿಗೆ 7ಬಿ (1) ತಿದ್ದುಪಡಿ ಕ್ರಮ ಕೈಗೊಳ್ಳಲು ಎಂದು ಒತ್ತಾಯಿಸಿದರು.ಕೆಪಿಎ ಉಪಾಧ್ಯಕ್ಷ ಪ್ರಮೋದ್, ಕಾರ್ಯದರ್ಶಿ ಅನಿಲ್ ಸಹುರ್ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin