ಚಿಕ್ಕೋಡಿ, ಅಥಣಿ ರಾಯಭಾಗ ತಾಲೂಕಿನ ನದಿ ತೀರದ ಜನ ಸಂಕಷ್ಟಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

123
ಅಥಣಿ,ಸೆ26- ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿ ಹಾಗೂ ಅದರ ಉಪ ನದಿಗಳು ತುಂಬಿ ಹರಿಯುತ್ತಿವೆ.ಇಂದು ಕೂಡಾ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜಾ ಪೂಬ್ರ್ಯಾರೇಜ, ದೂದ್‍ಗಂಗಾ ನದಿಯಿಂದ ಕೃಷ್ಣಾ ನದಿಗೆ ಒಟ್ಟು ಅರವತ್ತು ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಪರಿಣಾಮ ಚಿಕ್ಕೋಡಿ , ಅಥಣಿ ರಾಯಭಾಗ ತಾಲೂಕಿನ ನದಿ ತೀರದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲಲ್ಲಿ ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿದ್ದರಿಂದ ಸಾರಿಗೆ ಸಂಪರ್ಕ ಕಡಿತಗೊಂಡಿದ್ದು, ಜನ ಪರದಾಡುವಂತಾಗಿದೆ.
ಒಂದು ಕಡೆ ಯಡೆಬಿಡದೇ ನಿನ್ನೆಯಿಂದ ದೋ ಎಂದು ಜಿನುಗುತ್ತಿರುವ ಮಳೆ,,, ಇನ್ನೊಂದೆಡೆ ಮಹರಾಷ್ಟ್ರದಲ್ಲಾದ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಕೃಷ್ಣ, ಮತ್ತು ಉಪನದಿಗಳು, ನದಿ ನೀರಿಗೆ ಜಲಾವೃತವಾದ ಸೇತುವೆಗಳು, ವಿದ್ಯುತ್ಕಂಬಗಳು, ರೈತರ ಪಂಪ್‍ಸೆಟ್‍ಗಳು…. ಸೇತುವೆಗಳು ಮುಳುಗಿದ್ದರಿಂದ ಪರದಾಡಿದ ಗ್ರಾಮಸ್ಥರು .ಕಳೆದ ಒಂದು ವಾರದಿಂದ ಮಹರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾರಾಕಾರ ಮಳೆಯಿಂದಾಗಿ ಕರ್ನಾಟಕದಲ್ಲಿ ಕೃಷ್ಣೆ ಮೈದುಂಬಿ ಹರಿಯುತ್ತಿದ್ದಾಳೆ.

 

► Follow us on –  Facebook / Twitter  / Google+

Facebook Comments

Sri Raghav

Admin