ಚಿತ್ರದುರ್ಗ ನಗರಸಭೆ ವತಿಯಿಂದ ನಗರಸಭೆಯಿಂದ ‘ಆಪರೇಷನ್ ಹಂದಿ’ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Handi-01

ಚಿತ್ರದುರ್ಗ, ಅ.18- ನಗರದಲ್ಲಿ ಹಂದಿಗಳ ಉಪಟಳ ನಿಯಂತ್ರಿಸಲು ನಗರಸಭೆ ವತಿಯಿಂದ ಹಂದಿಗಳ ಅಪರೇಷನ್ ಪ್ರಾರಂಭವಾಗಿದೆ. ಇದುವರೆವಿಗೂ ಹಂದಿಯ ಮಾಲೀಕರಿಗೆ ಸೂಚನೆಯನ್ನು ನೀಡಿ ನಗರದಿಂದ ಹೊರಗೆ ಸಾಗಾಟ ಮಾಡುವಂತೆ ತಿಳಿಸಿದ್ದರೂ ಸಹಾ ಅದರ ಬಗ್ಗೆ ಗಮನ ನೀಡದೇ ಇದ್ದಾಗ ನಗರಸಭೆ ಆಪರೇಷನ್ ಹಂದಿ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದೆ. ಹಂದಿಯನ್ನು ಹಿಡಿಯಲು ಯಾವುದೇ ಗುತ್ತಿಗೆ ನೀಡಿಲ್ಲ. ಆದರೆ ಸಿಕ್ಕ ಹಂದಿಯನ್ನು ಯಾರೂ ಬೇಕಾದರೂ ತೆಗೆದುಕೊಂಡು ಹೋಗಬಹುದು ಎಂಬ ನಗರಸಭೆ ಸೂಚನೆ ಮೇರೆಗೆ ತಮಿಳುನಾಡು ಮೂಲದವರು ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದ ಹಂದಿಗಳನ್ನು ಹಿಡಿದು ಸಾಗಣೆ ಮಾಡಿದರು. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹಂದಿಗಳ ಬಗ್ಗೆ ಚರ್ಚೆಯಾಗಿದ್ದು ಅಲ್ಲದೆ ಜನತೆಯಿಂದಲೂ ಸಹಾ ದೂರು ಬಂದ ಹಿನ್ನಲೆಯಲ್ಲಿ ನಗರದ ರಸ್ತೆಗಳಲ್ಲಿ ಓಡಾಡುತ್ತಿರುವ ಹಂದಿಗಳನ್ನು ಹಿಡಿಯುವಂತೆ ಮನವಿ ಮಾಡಿದ ಮೇರೆಗೆ ಕಾರ್ಯವನ್ನು ಪ್ರಾರಂಭ ಮಾಡಲಾಗಿದೆ.
ದನಗಳನ್ನು ಬೀದಿಯಲ್ಲಿ ಬಿಟ್ಟರೆ ಅದನ್ನು ಸೆರೆಹಿಡಿದು ಮಾಲೀಕರು ದಂಡ ಕಟ್ಟಿದ ಮೇಲೆ ಬಿಡಬೇಕು ಒಂದು ವೇಳೆ ಮಾಲೀಕರು ಬಾರದಿದ್ದರೆ ಹರಾಜು ಹಾಕಬೇಕು. ನಾಯಿಗಳನ್ನು ಕೊಲ್ಲುವಂತಿಲ್ಲ ಬದಲಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನೀಡುವ ಮೂಲಕ ಸಂತಾನ ವೃದ್ದಿಯಾಗದಂತೆ ನೋಡಿಕೊಳ್ಳಬೇಕೆಂಬ ನಿಯಮ ಇದೆ. ಆದರೆ ಹಂದಿಗಳನ್ನು ನಗರದ ವ್ಯಾಪ್ತಿಯಲ್ಲಿ ಬಿಟ್ಟರೆ ಸಾಗಾಣೆ ಮಾಡಲು ಅವಕಾಶ ಇದೆ. ಯಾರೂ ಹಂದಿಯನ್ನು ಊರಿನಿಂದ ಹೊರಗೆ ತೆಗೆದುಕೊಂಡು ಹೋಗುವುದಾದರೆ ಅಂತವರಿಗೆ ಅವಕಾಶ ಮಾಡಿಕೊಡಲಾಗುವುದು. 150 ಹಂದಿಗಳನ್ನು ಸೆರೆ ಹಿಡಿದಿರುವ ತಮಿಳುನಾಡು ಮೂಲದವರು ಅವುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೌರಾಯುಕ್ತ ಚಂದ್ರಪ್ಪ ಹೇಳಿದರು.
ನಗರದ ಕೊಳಚೆ ಪ್ರದೇಶದಲ್ಲಿ ವಾಸಾವಾಗಿದ್ದ ಹಂದಿಗಳನ್ನು ಪತ್ತೇ ಮಾಡುವುದರ ಮೂಲಕ ಅವುಗಳನ್ನು ಬಲೆ ಹಾಕಿ ಹಿಡಿಯಲಾಗಿದೆ, ನಗರದ ಅಗಳು ಎಂದು ಪ್ರಖ್ಯಾತವಾಗಿರುವ ಜೋಗಿಮಟ್ಟಿ ರಸ್ತೆಯ ಹಿಂಭಾಗದಲ್ಲಿ ಜಲಿ ಗಿಡಗಳ ಸಂದಿಯಲ್ಲಿ ಅಡಗಿದ್ದ ಹಂದಿಗಳನ್ನು ಓಡುಸುತ್ತಾ ದೂರದಲ್ಲಿ ಬಲೆಯನ್ನು ಹರಡಿ ಅವುಗಳನ್ನು ಹಿಡಿಯಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಆರೋಗ್ಯ ನಿರೀಕ್ಷಕರಾದ ಕಾಂತರಾಜ್, ಸರಳಾ, ಭಾರತಿ ಮತ್ತಿತರರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin