ಚಿತ್ರಾಲ್ ನಿಂದ ಇಸ್ಲಾಮಾಬಾದಿಗೆ ತೆರಳುತ್ತಿದ್ದ ವಿಮಾನ ಪತನ : 47 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

PK661

ಇಸ್ಲಾಮಾಬಾದ್. ಡಿ.07 : ಚಿತ್ರಾಲ್ ನಿಂದ ಇಸ್ಲಾಮಾಬಾದಿಗೆ ತೆರಳುತ್ತಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಅಬಟೋಬಾದ್ ಬಳಿ ಬುಧವಾರ ಸಂಜೆ ಪತನಗೊಂಡಿದೆ. ಸುಮಾರು 47 ಮಂದಿ ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿತ್ರಾಲ್ ನಿಂದ ಇಸ್ಲಾಮಾಬಾದ್ ಕಡೆಗೆ ಪ್ರಯಾಣ ಬೆಳೆಸಿತ್ತು ಆದರೆ 4.30ರ ಸುಮಾರಿಗೆ ಸಂಪರ್ಕ ಕಡಿತಗೊಂಡಿತು.

ಪಿಐಎ ವಿಮಾನ ಪಿಕೆ 661 ವಿಮಾನ ಎಟಿಆರ್ 42 ಏರ್ ಕ್ರಾಫ್ಟ್ ಆಗಿದ್ದು 40 ಮಂದಿ ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿಯನ್ನು ಹೊಂದಿತ್ತು. ಎಲ್ಲರೂ ಸಾವನ್ನಪ್ಪಿದ್ದಾರೆ. ವಿಮಾನ ಪತನವಾದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಐಎ ಕರಾಚಿ ಮೂಲದ ವಿಮಾನಯಾನ ಸಂಸ್ಥೆಯಾಗಿದ್ದು, ಪತನಗೊಂಡ ವಿಮಾನ ಸಂಖ್ಯೆ ಪಿಕೆ-661 ಎಂದು ಗುರುತಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin