ಚಿತ್ರೋದ್ಯಮಕ್ಕೂ ಸುರಕ್ಷಾ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

yash-2 ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕೂಡ ಈ ಬಗ್ಗೆ ಯೋಚಿಸುತ್ತಿದ್ದಾರೆ. ಮಾಸ್ತಿಗುಡಿ ಚಿತ್ರದ ದುರಂತ ಘಟನೆ ಎಲ್ಲರಿಗೂ ಒಂದು ಪಾಠವಾಗಿದೆ. ಏನಾದರೂ ಅಹಿತಕರ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಅಂಥವರಿಗೆ ಯಾವುದೇ ಥರದ ರಕ್ಷಣೆಗಳಿರುವುದಿಲ್ಲ. ಏನಾದರೂ ಒಂದು ವಿಮೆ ಅಂತ ಮಾಡಿಸಿದರೆ ಇಂಥ ಸಂದರ್ಭಗಳಲ್ಲಿ ತುಂಬಾ ಅನುಕೂಲಕರವಾಗಿರುತ್ತದೆ ಎಂದು ಬಹಳ ದಿನಗಳಿಂದಲೂ ಬೇಡಿಕೆ ಇತ್ತು. ಇದೀಗ ಆ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಹಾಗೂ ಗ್ಲೋಬಲ್ ಇನ್‍ಶೂರೆನ್ಸ್ ಬ್ರೋಕರ್ ಕಂಪನಿ ಸಹಯೋಗದೊಂದಿಗೆ ಕನ್ನಡ ಚಿತ್ರೋದ್ಯಮ ಕುಟುಂಬ ಸುರಕ್ಷಾ ಯೋಜನೆ ಆರಂಭಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭ ಮೊನ್ನೆ ಏಟ್ರಿಯಾ ಹೋಟೆಲಿನಲ್ಲಿ ನೆರವೇರಿತು.yash

ನಟ ಶಿವರಾಜ್‍ಕುಮಾರ್, ಯಶ್, ಛೇಂಬರ್ ಅಧ್ಯಕ್ಷರಾದ ಸಾ.ರಾ.ಗೋವಿಂದು, ಅಕಾಡೆಮಿ ಅಧ್ಯಕ್ಷರಾದ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಕೆಸಿಎನ್. ಚಂದ್ರ ಶೇಖರ್ ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದು ಮಾತನಾಡಿದರು. ನಟ ಯಶ್ ಮಾತನಾಡಿ ನಿರ್ಮಾಪಕರು ಎಂದರೆ ಅನ್ನದಾತರು, ಆದರೆ ಸಿನಿಮಾ ಫ್ಲಾಪ್ ಆದಾಗ ಯಾರೂ ಮಾತಾಡಿಸಲ್ಲ, ಚಿತ್ರ ಶುರು ಆದಾಗ ಕಲಾವಿದನಿಗೆ ಖುಷಿ, ಚಿತ್ರ ಬಿಡುಗಡೆಯದಾಗ ನಿರ್ಮಾಪಕರ ಮುಖದಲ್ಲಿ ಖುಷಿ ಇರಬೇಕೆಂದು ಬಯಸುವವನು ನಾನು. ಇತ್ತೀಚಿನ ಸ್ಥಿತಿಗತಿ ನೋಡಿದರೆ ಈ ಥರ ಒಂದು ವಿಮೆ ಅಂತ ಇರೋದು ಒಳ್ಳೇದು ಅನ್ಸುತ್ತೆ ನಮ್ಮ ಕೆಜಿಎಫ್ ಚಿತ್ರದ ಎಲ್ಲರಿಗೂ ವಿಮೆ ಮಾಡಿಸಲಾಗಿದೆ ಎಂದು ಹೇಳಿದರು.yash-3

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin