ಚಿನ್ನದ ಅಂಬಾರಿ ಅಭಿರಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ : ನಂಜೇರಾಜ್ ಅರಸ್ ಗೆ ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Nanjeraj-Araas

ನವದೆಹಲಿ, ಆ.28- ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿರುವ ಸುವರ್ಣ ಸಿಂಹಾಸನ ಮತ್ತು ಚಿನ್ನದ ಅಂಬಾರಿಯ ಅಭಿರಕ್ಷೆ(ಕಸ್ಟಡಿ) ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯೊಂದನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.   ಮೈಸೂರು ಅರಮನೆಯ ಸುಪರ್ದಿಯಲ್ಲಿರುವ ಬಂಗಾರದ ಸಿಂಹಾಸನ ಹಾಗೂ ಅರಸರ ರಾಜಮನೆತನದಿಂದ ಜಗತ್ಪ್ರಸಿದ್ಧ ದಸರಾ ಸಂದರ್ಭದಲ್ಲಿ ಬಳಸುವ ಚಿನ್ನದ ಅಂಬಾರಿ ಬಳಕೆ ಪ್ರಶ್ನಿಸಿ ಪ್ರೊ.ಪಿ.ವಿ.ನಂಜರಾಜೇ ಅರಸ್ ಅವರು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು.  ಈ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಪೀಠವೊಂದು ಈ ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ಮೈಸೂರು ಅರಮನೆ(ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ , 1998 ವಿಷಯ ಪ್ರಶ್ನಿಸಲ್ಪಟ್ಟಿರುವ ಕರ್ನಾಟಕ ಹೈಕೋರ್ಟ್ನ ಮೊರೆ ಹೋಗುವಂತೆ ಪೀಠವು ಸೂಚಿಸಿದೆ.  ನ್ಯಾಯಮೂರ್ತಿಗಳಾದ ಎ.ಎಂ.ಖಾನ್ ವಿಲ್ನರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಿ, ಹೈಕೋರ್ಟ್ ಮೊರೆ ಹೋಗಲು ಅರಸ್ ಅವರಿಗೆ ಸ್ವಾತಂತ್ರ್ಯ ನೀಡಿದೆ.  ಅರ್ಜಿಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪರಿಗಣಿಸಿ ಸುಪ್ರೀಂಕೋರ್ಟ್ ಮನವಿ ಮಜಾಗೊಳಿಸುವ ಆದೇಶ ನೀಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin