`ಚಿನ್ನದ ಗೊಂಬೆ’ ಜಯಲಲಿತಾ ಅವರ ಬಣ್ಣದ ಲೋಕದ ಜರ್ನಿ ಹೇಗಿತ್ತು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Cinema-1
ಬೆಂಗಳೂರು, ಡಿ.6-ಕನ್ನಡ ಚಿತ್ರರಂಗದ ವರನಟ ರಾಜ್‍ಕುಮಾರ್ ನಟಿಸಿದ್ದ ಶ್ರೀ ಶೈಲ ಮಹಾತ್ಮೆ ಚಿತ್ರದಲ್ಲಿ ಬಾಲ ಪ್ರತಿಭೆಯಾಗಿ ನಟಿಸುವ ಮೂಲಕ ಜಯಲಲಿತಾ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 1961ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ರಾಜ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿದ್ದರೆ, ಕೃಷ್ಣ ಕುಮಾರಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.  ಜಯಲಲಿತಾ 1962ರಲ್ಲಿ ತೆರೆ ಕಂಡ ಹಿಂದಿ ಚಿತ್ರ ಮನ್‍ಮೌಜಿಯಲ್ಲಿ ಕೃಷ್ಣನ ಪಾತ್ರ ಮಾಡಿದ್ದು, 3 ನಿಮಿಷದ ಹಾಡೊಂದರಲ್ಲಿ ನೃತ್ಯ ಮಾಡಿದ್ದರು. ಇವರಿಗೆ ರಾಧೆಯಾಗಿ ಕುಮಾರಿ ನಾಜ್ ಸಾಥ್ ನೀಡಿದ್ದರು. ಚಿತ್ರದಲ್ಲಿ ನಾಯಕನಾಗಿ ಕಿಶೋರ್ ಕುಮಾರ್ ಮಿಂಚಿದ್ದರು.

Cinema-2

ಇದಲ್ಲದೇ ಟೀ ಹೌಸ್ ಆಫ್ ಆಗಸ್ಟ್ ಮೂನ್ ಹಾಗೂ ಅಂಡರ್ ಸೆಕ್ರೆಟರಿ ಎನ್ನುವ ಇಂಗ್ಲಿಷ್ ಚಿತ್ರದಲ್ಲೂ ಬಾಲ ಪ್ರತಿಭೆಯಾಗಿ ಮಿಂಚಿದ್ರು. ಇದಾದ ಬಳಿಕ 1964ರಲ್ಲಿ ಬಿ.ಆರ್.ಪಂತಲು ನಿರ್ದೇಶನದಲ್ಲಿ ಜಯಲಲಿತಾ ಕನ್ನಡ ಚಿನ್ನದ ಗೊಂಬೆ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು. ಆಗ ಅವರಿಗೆ ಕೇವಲ 15 ವರ್ಷಗಳು ಮಾತ್ರ. ಈ ನಡುವೆ ಅಮರಶಿಲ್ಪಿ ಜಕಣಾಚಾರಿ ಚಿತ್ರದಲ್ಲಿ ಮಲ್ಲಿಗೆಯ ಹೂವಿನಂತ ಎಂಬ ಹಾಡೊಂದಕ್ಕೆ ಹೆಜ್ಜೆ ಹಾಕಿದರು. ಅಷ್ಟರಲ್ಲಿ ಜಯಲಲಿತಾ ಚಿನ್ನದ ಗೊಂಬೆ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಅವರು 3 ಸಾವಿರ ರೂ. ಸಂಭಾವನೆ ಪಡೆದಿದ್ದರು.

Cinema-4

ಈ ವೇಳೆ ಜಯಲಲಿತಾ ಒಂದೆರಡು ತಮಿಳು ಚಿತ್ರಗಳಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಮನೆ ಅಳಿಯ, ಮಾವನ ಮಗಳು, ನನ್ನ ಕರ್ತವ್ಯ ಬದುಕಿನ ದಾರಿ ಹೀಗೆ ಸುಮಾರು ಐದಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಆದರೆ 1965ರಲ್ಲಿ ವೆನ್ನಿರಾ ಆಡೈ ತಮಿಳು ಚಿತ್ರದಲ್ಲಿ ಜಯಲಲಿತಾ ನಾಯಕಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದರು.  ಬಳಿಕ ತೆಲುಗಿನ ಸ್ಟಾರ್ ಆಗಿದ್ದ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮನುಶುಲು ಮಮತಲು ಚಿತ್ರದಲ್ಲಿ ನಟಿಸಿದರು. ಅಲ್ಲದೇ ಜಯಲಲಿತಾ ತಮ್ಮ ಕೊನೆಯ ತೆಲುಗು ಚಿತ್ರ ನಾಯಕುಡು ವಿನಾಯಕುಡು ಚಿತ್ರದಲ್ಲಿ ನಾಗೇಶ್ವರ ರಾವ್ ಜೊತೆ ನಟಿಸಿದ್ದರು. ಈ ಚಿತ್ರ 1980ರಲ್ಲಿ ತೆರೆಕಂಡಿತ್ತು.

Cinema-5

ಕೇವಲ ತಮಿಳು, ತೆಲುಗಿಗೆ ಸೀಮಿತವಾಗಿರದ ಜಯಲಲಿತಾ ಹಿಂದಿಯ ನಟ ಧರ್ಮೇಂದ್ರ ಅವರ ಜೊತೆಗೆ 1968ರಲ್ಲಿ ಇಜ್ಜತ್ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು. ಇತ್ತ 1965ರಿಂದ 1973ರಲ್ಲಿ ಎಂ.ಜಿ. ರಾಮಚಂದ್ರನ್ ಜೊತೆ ನಟಿಸಿದ್ದ 8 ಚಿತ್ರ ಗಳು ಬ್ಲಾಕ್‍ಬಸ್ಟರ್ ಹಿಟ್ ಆದವು. ಅದರಲ್ಲಿ 1965ರಲ್ಲಿ ಬಂದ ಆಯಿರತ್ತಿಲ್ ಒರುವನ್, ಪಟ್ಟಿಕಾಟು, ಪೊನ್ನಯ್ಯ ಒಟ್ಟಿನಲ್ಲಿ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಜಯಲಲಿತಾ ಆ ಕಾಲದ ಜನಪ್ರಿಯ ನಟಿ ಎನಿಸಿಕೊಂಡಿದ್ದರು.

Cinema-6

ಜಯಲಲಿತಾ ನಾಯಕಿಯಾಗಿ ಒಟ್ಟು 140 ಚಿತ್ರಗಳನ್ನು ಮಾಡಿದ್ದಾರೆ. ತಮಿಳಿನಲ್ಲಿ ಒಟ್ಟು 92 ಚಿತ್ರಗಳನ್ನ ಮಾಡಿದ್ದು ಅದರಲ್ಲಿ 85 ಚಿತ್ರಗಳು ಹಿಟ್ ಆಗಿವೆ. ಇದರಲ್ಲಿ 26ಕ್ಕೂ ಹೆಚ್ಚು ಚಿತ್ರಗಳನ್ನು ಎಂ.ಜಿ. ರಾಮಚಂದ್ರನ್ ಜೊತೆ ಮಾಡಿದ್ದರು. ಇನ್ನೂ ತೆಲುಗಿನಲ್ಲಿ ಒಟ್ಟು 28 ಚಿತ್ರಗಳಲ್ಲಿ ಮಿಂಚಿದ ಜಯಲಲಿತಾ 1965-1980ರ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾಗಿದ್ದರು. ಒಟ್ಟು 119 ಬಾಕ್ಸ್ ಆಫೀಸ್ ಹಿಟ್ ಚಿತ್ರಗಳನ್ನ ನೀಡಿದ ಜಯಲಲಿತಾ 9 ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ 6 ಚಿತ್ರಗಳು ಹಿಂದಿ ಭಾಷೆಗೆ ಡಬ್ ಆದವು. ಕೊನೆಯದಾಗಿ ನಟ ಶರತ್ ಬಾಬು ಜೊತೆಗೆ 1980ರಲ್ಲಿ ನದಿಯೈ ತೇಡಿ ವಂದಾ ಕಾದಲ್ ಚಿತ್ರದಲ್ಲಿ ನಟಿಸಿದರು.

Cinema-7

ಜಯ ಲಲಿತಾ ದಕ್ಷಿಣ ಭಾರತದ ಪ್ರಖರ ವಾದ ತಾರೆಯಂತೆ ಪ್ರಜ್ವಲಿಸಿದರು. ಸಿನಿಮಾ ರಂಗದಲ್ಲಿ ಹೇಗೆ ಜನರನ್ನು ಆಕರ್ಷಿಸುತ್ತಾ ನೆಚ್ಚಿನ ನಟಿಯಾಗಿ ಮಿಂಚಿದರೋ ಅದೇ ರೀತಿ ರಾಜಕೀಯ ವಲಯದಲ್ಲೂ ಕೂಡ ತಮ್ಮ ಸಾಮಥ್ರ್ಯ ಎಂಥದ್ದು ಎಂಬುದನ್ನು ಸಾಬೀತು ಪಡಿಸಿದ ಮಹಾನ್ ಪ್ರತಿಭೆ.

Cinema-8

ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Cinema-3'

ಜಯಲಲಿತಾ ಕನ್ನಡ ಚಿತ್ರಗಳು:  ಚಿನ್ನದ ಗೊಂಬೆ(1964), ಮನೆ ಅಳಿಯ, ನನ್ನ ಕರ್ತವ್ಯ (1965), ಮಾವನ ಮಗಳು, ಬದುಕುವ ದಾರಿ (1966)

 ತಮಿಳು ಚಿತ್ರಗಳು: ಯಾರ್ ನೀ?, ನೀ, ವೈರಂ, ವಂದಲೇ ಮಗರಸಿ, ಬೊಮ್ಮಲಟ್ಟಂ, ರಾಜ ವೀಟ್ಟು ಪಿಳ್ಳೈ, ಥಂಗ ಗೋಪುರಂ, ಚಿಕ್ಕಡು ದೊರಕ್ಕಡು, ಟಿಕ್ಕ ಶಂಕರಯ್ಯ, ನಿಲುವು ದೊಪಿಡಿ, ಶ್ರೀ ಕೃಷ್ಣ ವಿಜಯಂ, ಗೌರಿ ಕಲ್ಯಾಣಂ, ಕುಮಾರಿ ಪೇಣಿ, ನಾನ್ ï, ಮಗರಸಿ, ಮಾಡಿ ವೀಟ್ಟು ಮಾಪ್ಪಿಳೈ, ಪಣಕ್ಕಾರ ಪಿಳ್ಳೆ, ಮೂಂಡ್ರು ಎಯುದು, ಅಂಡ್ರ ಕಂಡ ಮುಗಂ, ಅವಳುಕ್ಕು ಆಯಿರಂ ಕಂಗಲï, ಚಂದ್ರೋದಯಂ, ಆಡಿಮೈ ಪೇಣಿ, ಎಂಗಿರುಂದೋ ವಂದಾಲï, ಸೂರ್ಯಗಂಧಿ, ಪಟ್ಟಿಕಡಾ ಪಟ್ಟಣಂ, ಗಲಾಟ ಕಲ್ಯಾಣಂ, ದೈವ ಮಗನï, ತಿರುಮಂಗಲಂ, ಕಾನಾವನ್ ಮನೈವಿ, ಎನ್ ಅಣ್ಣನï, ಕಣ್ಣನ್ ಎನ್ ಕಾದಲಳ್, ಒರು ತಾಯಿ ಮಕ್ಕಳ, ಚಿತ್ರ ಪೌರ್ಣಮಿ, ಇತ್ಯಾದಿ.

ತೆಲುಗು ಚಿತ್ರ: ಶ್ರೀ ಕೃಷ್ಣ ಸತ್ಯ, ಬಾಗ್ದಾದ್ ಪೇರಯಗಿ, ಗಾಂಧಿಕೋಟ ರಹಸ್ಯಂ, ಆಲಿ ಬಾಬಾ 40 ದೊಂಗಲು, ದೇವುಡು ಚೇಸಿನ ಮನುಷ್ಯುಲು, ಕಡಲಡು ವಡಲಡು, ಕಥಾನಾಯಕುಡು, ಮನಷುಲು ಮಮತಲು, ಆಸ್ತಪರುಲು, ಬ್ರಹ್ಮಚಾರಿ, ಆದರ್ಶ ಕುಟುಂಬಂ, ಅದೃಷ್ಟವಂತಲು, ಭಾರ್ಯ ಬಿಡ್ಡಲು ಇತರೆ. ಕೇವಲ ತಮಿಳು, ತೆಲುಗು ಮಾತ್ರವಲ್ಲದೇ ಮಲಯಾಳಂನಲ್ಲೂ ಜಯಲಲಿತಾ ನಟಿಸಿದ್ದು, ಜೀಸಸï(1973) ಅಲ್ಲದೇ ಆಕೆಯ 100ನೇ ಸಿನಿಮಾ ಎಂಬ ಖ್ಯಾತಿ ಪಡೆದಿದ್ದ ತಿರುಮಂಗಲಂ (1974) ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.

Facebook Comments

Sri Raghav

Admin