ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Chinnaswamy-S

ಸಿಡ್ನಿ , ಜ.15- ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯ 2ನೆ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಅತಿಥ್ಯ ವಹಿಸಲಿದೆ. ಮಳೆಯಾದರೂ ಪಂದ್ಯಕ್ಕೆ ಅಡ್ಡಿಯಾಗದಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ನಂತರ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದ್ದು ಕ್ರೀಡಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

ಮ್ಯಾಕ್ಸ್‍ವೆಲ್, ಅಗರ್‍ಗೆ ಛಾನ್ಸ್:

ಟೆಸ್ಟ್ ರ್ಯಾಂಕಿಂಗ್‍ನಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿರುವ ಭಾರತ ವಿರುದ್ಧ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ತಂಡವನ್ನು ಪ್ರಕಟಿಸಿದೆ.
ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ 3 ಟೆಸ್ಟ್ ಪಂದ್ಯಗಳನ್ನು ಕ್ಲೀನ್ ಸ್ವೀಮ್ ಮಾಡಿರುವ ಆಸ್ಟ್ರೇಲಿಯಾ ಈಗ ಭಾರತ ವಿರುದ್ಧವೂ ಸರಣಿ ಗೆಲುವು ಸಾಧಿಸುವ ಮೂಲಕ ನಂಬರ್ 1 ಸ್ಥಾನಕ್ಕೇರಲು ಉತ್ಸುಕವಾಗಿದೆ. ತಂಡವನ್ನು ಸ್ಟೀವನ್‍ಸ್ಮಿತ್ ಮುಂದುವರೆಸಿದರೆ, ಪಾಕಿಸ್ತಾನ ಸರಣಿಯಿಂದ ತಂಡದಿಂದ ಹೊರಗುಳಿದಿದ್ದ ಸ್ಫೋಟಕ ಬ್ಯಾಟ್ಸ್‍ಮನ್ ಗ್ಲೇನ್ ಮ್ಯಾಕ್ಸ್‍ವೆಲ್‍ಗೆ 16ರ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿದರೆ, ಯುವ ಬೌಲರ್ ಅಗರ್‍ಗೆ ಅವಕಾಶ ಕಲ್ಪಿಸಲಾಗಿದೆ.

ಮೊದಲ ಟೆಸ್ಟ್ ಫೆಬ್ರವರಿ 23 ರಂದು ಪುಣೆ, ದ್ವಿತೀಯ ಟೆಸ್ಟ್:

ಮಾರ್ಚ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು, ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಗಳು ರಾಂಚಿ ಹಾಗೂ ಧರ್ಮಶಾಲಾಗಳಲ್ಲಿ ನಡೆಯಲಿದೆ. ತಂಡದ ವಿವರ: ಡೇವಿನ್ ವಾರ್ನರ್, ಮ್ಯಾಟ್ ರೆನ್‍ಸಾವ್, ಉಸ್ಮಾನ್ ಕ್ವಾಜಾ, ಸ್ಟೀವ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್‍ಕೋಮ್, ಸ್ಟೀವ್ ಓ ಕೆಫೆ, ಜೋಸ್ ಹೆಜಲ್‍ವುಡ್, ನ್ಯಾಥನ್ ಲಿಯೋನ್, ಶಾನ್ ಮಾರ್ಷ್, ಜಕ್ಸಾನ್ ಬರ್ಡ್, ಗ್ಲೇನ್ ಮ್ಯಾಕ್ಸ್‍ವೆಲ್, ಮಿಚಲ್ ಸ್ವೇಪ್‍ಸನ್, ಅಸ್ಟೋನ್ ಅಗರ್, ಮಿಚಲ್ ಮಾರ್ಷ್, ಮ್ಯಾಟ್ ವೇಡ್, ಮಿಚಲ್ ಸ್ಟ್ರಾಕ್.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin