ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಂಜೆ ಟಿ-20 ಹೈವೋಲ್ಟೇಜ್ ನಿರ್ಣಾಯಕ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

T20-In-Bengaluru

ಬೆಂಗಳೂರು,ಫೆ.1-ಇಂದು ಸಂಜೆ 7 ಗಂಟೆಗೆ ನಡೆಯಲಿರುವ ಭಾರತ, ಇಂಗ್ಲೆಂಡ್ ನಡುವಿನ ನಿರ್ಣಾಯಕ ಟಿ-20 ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಟಿ-20 ಸರಣಿಯ ನಿರ್ಣಾಯಕ ಪಂದ್ಯ ಇಂದು ನಡೆಯುತ್ತಿರುವುದರಿಂದ ಸಹಜವಾಗಿಯೇ ಕ್ರಿಕೆಟ್ ಅಭಿಮಾನಿಗಳ ದಂಡೇ ಕ್ರೀಡಾಂಗಣದತ್ತ ಧಾವಿಸಿದೆ. ಭಾರತ-ಇಂಗ್ಲೆಂಡ್ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಇಂದು ನಡೆಯುವ ಪಂದ್ಯ ಸರಣಿ ಜಯಕ್ಕೆ ಭಾರೀ ಹಣಾಹಣಿ ನಡೆಯಲಿದ್ದು, ರನ್‍ಗಳ ಸುರಿಮಳೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಚಿನ್ನಸ್ವಾಮಿ ಅಂಕಣ ಬ್ಯಾಟ್ಸ್‍ಮನ್‍ಗಳ ಸ್ವರ್ಗ ಎಂದೇ ಬಿಂಬಿತವಾಗಿದ್ದು, ಎರಡೂ ತಂಡಗಳಲ್ಲಿರುವ ಟಿ-20 ಸ್ಪೆಷಲಿಸ್ಟ್ ಆಟಗಾರರು ಇದಕ್ಕಾಗಿ ಸಾಕಷ್ಟು ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಈ ಹಿಂದೆ ಇಲ್ಲಿ ನಡೆದಿದ್ದ ಅನೇಕ ಪಂದ್ಯಗಳಲ್ಲಿ ಬ್ಯಾಟ್ಸಮನ್‍ಗಳು ಚೆಂಡನ್ನು ಕ್ರೀಡಾಂಗಣದಾಚೆಗೆ ಬಾರಿಸಿದ ಉದಾಹರಣೆಗಳಿವೆ.

ಕೇಂದ್ರ ಬಜೆಟ್ – 2017 (Live Updates) ]

ಬೌಂಡರಿ ರೇಖೆ ತೀವ್ರ ಹತ್ತಿರವಾಗಿರುವುದರಿಂದ ರನ್‍ಗಳ ಸರಾಗವಾಗಿ ಹರಿದುಬರಲಿದೆ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ. ಐಪಿಎಲ್‍ನಲ್ಲಿ ಆರ್‍ಸಿಬಿ ಸಾರಥ್ಯ ವಹಿಸಿದ್ದ ಟೀಂ ನಾಯಕ ವೀರಾಟ್ ಕೊಹ್ಲಿಗೆ ಇಲ್ಲಿನ ವಾತಾವರಣದ ಅರಿವಿದ್ದು, ಕರ್ನಾಟಕದವರೇ ಆದ ಕೆ.ಎಲ್.ರಾಹುಲ್ ಮತ್ತು ಮನೀಶ್ ಪಾಂಡೆ ಮೇಲೆ ಭರವಸೆ ಹೊಂದಿದ್ದು, ಇಂಗ್ಲೆಂಡ್‍ನ್ನು ಹೇಗೆ ಮಣಿಸಬೇಕು ಎಂಬುದರ ಬಗ್ಗೆ ಕಾರ್ಯತಂತ್ರ ಹೆಣೆದಿದ್ದಾರೆ.  ಆಂಗ್ಲ ಪಡೆ ಕೂಡ ಅಷ್ಟು ಸಲೀಸಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಕಳೆದೆರಡು ಪಂದ್ಯಗಳಲ್ಲಿ ಸಾಬೀತಾಗಿದೆ. ಆದ್ದರಿಂದ ಕ್ಷೇತ್ರ ರಕ್ಷಣೆಯೇ ತಂಡದ ಬಹುತೇಕ ಸೋಲು-ಗೆಲುವನ್ನು ನಿರ್ಧರಿಸಲಿದೆ.

ಪ್ರವಾಸಿ ಇಂಗ್ಲೆಂಡ್‍ನ ಕೊನೆಯ ಪಂದ್ಯವಾಗಿರುವುದರಿಂದ ಹಾಗೂ ಈಗಾಗಲೇ ಇಂಗ್ಲೆಂಡ್ ವಿರುದ್ದ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನು ಗೆದ್ದಿರುವ ಭಾರತಕ್ಕೆ ತಕ್ಕ ಉತ್ತರ ನೀಡಲು ಸಜ್ಜಾಗಿರುವ ಇಂಗ್ಲೆಂಡ್ ಪಡೆ ಇಂದಿನ ಆಟವನ್ನು ಗಂಭೀರವಾಗಿ ಪರಿಗಣಿಸಿದ್ದು, ಪಂದ್ಯ ಗೆಲ್ಲಲೇಬೇಕೆಂಬ ತವಕದಲ್ಲಿದೆ.  ಸಂಜೆ ನಡೆಯಲಿರುವ ಪಂದ್ಯಕ್ಕೆ ಭದ್ರತಾ ದೃಷ್ಟಿಯಿಂದ ಒಬ್ಬರು ಡಿಸಿಪಿ, 17 ಎಸಿಪಿ, 800 ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಗೇಟ್ ನಂಬರ್‍ಗಳಲ್ಲಿ ಬದಲಾವಣೆ ಮಾಡಲಾಗಿದೆ.   ಟಿಕೆಟ್ ಮೇಲಿರುವ ಗೇಟ್ ನಂಬರ್‍ನಲ್ಲಿಯೇ ಪ್ರೇಕ್ಷಕರು ಕ್ರೀಡಾಂಗಣಕ್ಕೆ ತೆರಳಬೇಕು. ಈ ಹಿಂದೆ 1 ಗೇಟ್ ನಂಬರ್‍ನ 21ಕ್ಕೆ ಬದಲಾವಣೆ ಮಾಡಲಾಗಿದೆ. ಬಿಎಂಟಿಸಿ ಮತ್ತು ಮೆಟ್ರೊ ಸಂಚಾರವನ್ನು ತಡರಾತ್ರಿಯವರೆಗೆ ಕಲ್ಪಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin