ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ ಅನುಮಾನಾಸ್ಪದ ಚೀಲ

ಈ ಸುದ್ದಿಯನ್ನು ಶೇರ್ ಮಾಡಿ

Chinnaswamy-Stadium--01

ಬೆಂಗಳೂರು, ಏ.16-ಆರ್‍ಸಿಬಿ ಮತ್ತು ಪುಣೆ ತಂಡಗಳ ನಡುವಿನ ಐಪಿಎಲ್ ಪಂದ್ಯ ರಾತ್ರಿ 8 ರಿಂದ 11 ಗಂಟೆಯವರೆಗೆ ನಡೆಯಲಿರುವ ಈ ಪಂದ್ಯಕ್ಕೆ ಸುಮಾರು 35 ಸಾವಿರಕ್ಕೂ ಹೆಚ್ಚು ಜನ ಟಿಕೆಟ್ ಪಡೆದಿದ್ದರು.  ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಬೆಳಗ್ಗೆಯಿಂದ ವ್ಯಾಪಕ ಪರಿಶೀಲನೆ ನಡೆಸಲಾಗುತ್ತಿತ್ತು. ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ನಡುವೆ ಎಲ್ಲರಲ್ಲಿ ಆತಂಕ ಸೃಷ್ಟಿಸಿದ್ದು ಆ ಒಂದು ಗೋಣಿಚೀಲ. ಕ್ರೀಡಾಂಗಣದ ಸುತ್ತ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದರು. ಈ  ಸಂದರ್ಭದಲ್ಲಿ ಕಂಡುಬಂದ ಈ ಗೋಣಿಚೀಲ ಅವರಿಗೂ ಸಾಕಷ್ಟು ಅನುಮಾನ ಮೂಡಿಸಿತ್ತು. ಕೂಡಲೇ ಅವರು ಅದನ್ನು ಪರಿಶೀಲಿಸಿದರು. 

ಅದೇ ಸಮಯದಲ್ಲಿ ಮಾಧ್ಯಮದವರೊಬ್ಬರು ಇದನ್ನು ಚಿತ್ರಿಸಿ ಕ್ರೀಡಾಂಗಣದ ಬಳಿ ಅನುಮಾನಾಸ್ಪದವಾದ ಬ್ಯಾಗ್‍ವೊಂದು ಪತ್ತೆ… ಪೊಲೀಸರಿಂದ ತೀವ್ರ ಶೋಧ ಎಂಬ ಸುದ್ದಿ ಬಿತ್ತರಿಸಿದರು. ಆಗ ಕ್ರೀಡಾಂಗಣಕ್ಕೆ ಬರುತ್ತಿದ್ದವರಲ್ಲಿ ಆತಂಕ ಹೆಚ್ಚಾಗಿತ್ತು. ಇತ್ತ ಪೊಲೀಸರು ಆ ಚೀಲವನ್ನು ಸಂಪೂರ್ಣವಾಗಿ ಶೋಧ ನಡೆಸಿದಾಗ ಆ ಚೀಲದಲ್ಲಿ ಬೆಡ್‍ಶೀಟ್, ಹಳೇ ಶರ್ಟ್ ಇತ್ತು. ರಾತ್ರಿ ಯಾರೋ ಈ ಚೀಲವನ್ನು ಹಾಗೆಯೇ ಬಿಟ್ಟು ಹೋಗಿರಬಹುದು. ಒಟ್ಟಾರೆ ಈ ಗೋಣಿಚೀಲ ಕೆಲವೊಂದಷ್ಟು ಕಾಲ ಆತಂಕವನ್ನು ತಂದಿದ್ದಂತೂ ಸತ್ಯ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‍ಸಿಬಿ-ಪುಣೆ ಐಪಿಎಲ್ ಪಂದ್ಯ: ವ್ಯಾಪಕ ಬಂದೋಬಸ್ತ್ : 

ಬೆಂಗಳೂರು, ಏ.16-ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾತ್ರಿ 8 ರಿಂದ 11.30ರವರೆಗೆ ನಡೆಯಲಿರುವ ಆರ್‍ಸಿಬಿ ಮತ್ತು ಪುಣೆ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.  ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಕ್ರೀಡಾಂಗಣದ ಸುತ್ತ ವ್ಯಾಪಕ ಶೋಧ ನಡೆಸಿದರು. ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯದಳಗಳಿಂದ ಕ್ರೀಡಾಂಗಣದ ಸುತ್ತ ಪರಿಶೀಲನೆ ನಡೆಸಲಾಯಿತು. ಕ್ರೀಡಾಂಗಣದ ಸಮೀಪ ಅನುಮಾನಾಸ್ಪದ ಬ್ಯಾಗ್‍ವೊಂದು ಇದೆ ಎಂದು ಖಾಸಗಿ ವಾಹಿನಿಯಲ್ಲಿ ಸುದ್ದಿ ಬಿತ್ತರವಾದ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ಶೋಧ ನಡೆಸಿದರು. ನಂತರ ಇದು ಗಾಳಿ ಸುದ್ದಿ ಎಂಬುದು ಗೊತ್ತಾಯಿತು.

ರಾತ್ರಿ 8 ರಿಂದ 11.30ರವರೆಗೆ ನಡೆಯಲಿರುವ ಈ ಪಂದ್ಯಾವಳಿಗೆ ಅಧಿಕಾರಿಗಳು ಸೇರಿದಂತೆ 500 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕೆಎಸ್‍ಆರ್‍ಪಿ, ಸಿಎಆರ್ ಫ್ಲಟೂನ್‍ಗಳನ್ನು ನಿಯೋಜನೆ ಮಾಡಲಾಗಿದೆ. ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 11.30ರವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin