ಚಿರಂಜೀವಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ..!

ಈ ಸುದ್ದಿಯನ್ನು ಶೇರ್ ಮಾಡಿ

Chiranjeevi

ಹೈದರಾಬಾದ್, ಮೇ.04 :  150 ನೇ ಚಿತ್ರ ಕಿಲಾಡಿ ನಂ.1 ಮೂಲಕ ಕಮ್ ಬ್ಯಾಕ್ ಮಾಡಿದ್ದ ಮೆಗಾಸ್ಟಾರ್ ಚಿರಂಜೀವಿ ಈಗ ಮತ್ತೊಂದು ಚಿತ್ರಕ್ಕೆ ಸಹಿಹಾಕಿದ್ದು ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲೆ ನರಸಿಂಹ ರೆಡ್ಡಿಯವರ ಜೀವನಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸುದ್ದಿದ್ದಾರೆ, ಈ ಚಿತ್ರ ಆರಂಭದಲ್ಲೇ ಕ್ರೇಜ್ ಹುಟ್ಟುಹಾಕುತ್ತಿದೆ, ಏಕೆಂದರೆ ಚಿರು 151 ನೇ ಈ ಚಿತ್ರದಲ್ಲಿ ವಿಶ್ವಸುದರಿ ಐಶ್ವರ್ಯ ರೈ ನಟಿಸುದ್ದಿದ್ದಾರೆ ಎನ್ನಲಾಗಿದೆ.ತಾಯಿಯಾಗಿದ್ದ ಐಶ್ವರ್ಯ ರೈ ಐದು ವರ್ಷಗಳ ವಿಶ್ರಾಂತಿ ನಂತರ ಸಂಜಯ್ ಗುಪ್ತಾ ನಿರ್ದೇಶನದ ನಂತರ ಜಸ್ಬಾ ಮತ್ತು ಕರಣ್ ಜೋಹಾನ್ ನಿರ್ದೇಶನದ ‘ಏ ದಲ್ ಹೈ ಮುಶ್ಕಿಲ್’ ಚಿತ್ರಗಳಲ್ಲಿ ಅಭಿನಯಿಸಿದ್ದರು. ಈಗ ತೆಲುಗಿನ ರೋಮ್ಯಾನ್ಸ್ ಮಾಸ್ಟರ್ ಚಿರಂಜೀವಿ ಜೊತೆ ನಟಿಸುತ್ತಾರೆ ಎನ್ನಲಾಗಿದೆ.  ಎಚ್ಚರಿಕೆಯಿಂದ ಪಾತ್ರಗಳನ್ನೂ ಆಯ್ದುಕೊಳ್ಳುವ ಐಶ್ವರ್ಯ ಇದೆ ಮೊದಲ ಬಾರಿಗೆ ನೇರವಾಗಿ ಟಾಲಿವುಡ್ ಗೆ ಎಂಟ್ರಿಕೊಡುತ್ತಿದ್ದಾರೆ. ಈ ಮೊದಲ ಅವರು 1999 ರಲ್ಲಿ ನಾಗರ್ಜುನ ಅಭಿನಯಿಸಿದ್ದ ‘ರಾವಯ್ಯ ಚಂದಮಾಮಾ’ ಎಂಬ ಚಲನಚಿತ್ರದಲ್ಲಿ ‘ಲವ್ ಟು ಲೀವ್’ ಹಾಡಿನಲ್ಲಿ ವಿಶೇಷ ಪಾತ್ರವನ್ನು ಮಾಡಿದ್ದರು.

1994 ರಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದ ಐಶ್ವರ್ಯಾ ರೈ ಅವರು ಮಣಿರತ್ನಂ ನಿರ್ದೇಶನದ ಐರುವರ್ ಅವರೊಂದಿಗೆ ಅಭಿನಯಿಸಿದ್ದರು. ಇದರಲ್ಲಿ ಅವರು ಮೋಹನ್ ಲಾಲ್ ಮತ್ತು ಪ್ರಕಾಶ್ ರಾಜ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಈ ಚಿತ್ರದ ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿತ್ತು.   ‘ಮೆಗಾ ಸ್ಟಾರ್’ ಚಿರಂಜೀವಿ ಈ ವರ್ಷದ ಆರಂಭದಲ್ಲಿ ಖೈದಿ ನೋ 150 ರೊಂದಿಗೆ ರಾಜಕೀಯದಿಂದ ಸಿನಿಮಾಗೆ ರೀ ಎಂಟ್ರಿ ಕೊಟ್ಟಿದ್ದರು. ಈ ಬಾಕ್ಸ್ ಆಫೀಸ್ ನಲ್ಲಿ ಸದ್ದುಮಾಡಿತ್ತು.   1857 ರ ಭಾರತೀಯ ದಂಗೆಯೆಂದು ಕರೆಯಲ್ಪಡುವ 1857 ದಂಗೆಗೆ ಮುಂಚೆಯೇ ಬ್ರಿಟೀಷರ ವಿರುದ್ಧ ಹೋರಾಡಿದ ಯುವಲಾವಾಡ ನರಸಿಂಹ ರೆಡ್ಡಿ ಅವರು 1847 ರಲ್ಲಿ ಬ್ರಿಟೀಷರು ಮರಣದಂಡನೆಗೆ ಒಳಗಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin