ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ಬಿದ್ದ ಮೂವರು ಯುವಕರು..! 

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಹರಪನಹಳ್ಳಿ, ಮೇ 20- ಗ್ರಾಮಸ್ಥರಿಗೆ ತೀವ್ರ ಕಾಟ ಕೊಡುತ್ತಿದ್ದ ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ್ದ ಬೋನು ಅದು.. ಆದರೆ, ಆ ಬೋನಿನೊಳಗೆ ಸಿಕ್ಕಿ ಬಿದ್ದಿದ್ದು ಘಟಿಂಗ ಚಿರತೆ ಅಲ್ಲ…! ಚಿರತೆ ಕಂಡು ಪ್ರಾಣ ಭಯದಿಂದ ಓಡಿದ ಮೂವರು ಯುವಕರು. ಈ ಘಟನೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕಡತಿ ಬಳಿ ನಡೆದಿದೆ.  ಗ್ರಾಮದ ಹೊರವಲಯದಲ್ಲಿ ಚಿರತೆ ಕಾಟ ವಿಪರೀತವಾಗಿತ್ತು. ಕಾಡುಪ್ರಾಣಿಗಳನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಲ್ಲಿ ಬೋನುಗಳನ್ನು ಇಟ್ಟಿದ್ದರು. ಕಡತಿ ಗ್ರಾಮದ ಯುವಕರಾದ ಗುರುಬಸವ, ಕೊಟ್ರೇಶ ಮತ್ತು ಕುಮಾರ ರಾತ್ರಿ ಜಮೀನಿಗೆ ನೀರು ಹಾಯಿಸಲು ಹೋಗಿದ್ದರು. ಆಗ ದಿಢೀರನೆ ಒಂದು ಚಿರತೆ ಮತ್ತು ಎರಡು ಮರಿಗಳು ಎದುರಾದವು. ಇವುಗಳನ್ನು ನೋಡಿ ಹೆದರಿದ ಯುವಕರು ಪ್ರಾಣ ಭಯದಿಂದ ಓಡಿದರು.ಬೇರೆ ದಾರಿ ಕಾಣದೆ ಚಿರತೆ ಬೋನಿನೊಳಗೆ ನುಗ್ಗಿ ರಕ್ಷಣೆ ಪಡೆದರು. ಈ ಮೂವರು ನುಗ್ಗಿದ ರಭಸಕ್ಕೆ ಬೋನಿನ ಬಾಗಿಲು ಬಂದ್ ಆಯಿತು. ಚಿರತೆಯಿಂದ ಪಾರಾಗಲು ಚಿರತೆ ಬೋನಿನೊಗಳೇ ಸಿಕ್ಕಿಬಿದ್ದ ಇವರು ಪ್ರಾಣಾಪಾಯದಿಂದ ಪಾರಾದರು.  ಬೋನಿನೊಳಗೆ ಹೆದರಿ ಕುಳತಿದ್ದ ಯುವಕರು ತನ್ನ ಸ್ನೇಹಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ 15 ಜನರ ಗುಂಪು ಅಲ್ಲಿಗೆ ಬಂದು ಯುವಕರನ್ನು ರಕ್ಷಿಸಿದೆ. ಇದೇ ಸಂದರ್ಭದಲ್ಲಿ ಈ ಗುಂಪಿನಿಂದ 40 ಅಡಿ ದೂರದಲ್ಲಿ ಮೂರು ಚಿರತೆಗಳು ಮತ್ತೆ ಪ್ರತ್ಯಕ್ಷವಾಗಿದ್ದು, ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಯಿತಾದರೂ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆಗಳು ಅಲ್ಲಿಂದ ಕಾಲ್ಕಿತ್ತಿವೆ.  ಗ್ರಾಮದಲ್ಲಿ ಚಿರತೆಗಳ ಹಾವಳಿ ವಿಪರೀತವಾಗಿದ್ದು, ಇವುಗಳನ್ನು ಹಿಡಿದು ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin