ಚಿರತೆ ಬಂತು… ಚಿರತೆ…! ಕಿಡಿಗೇಡಿಗಳ ವದಂತಿಗೆ ಬೆಚ್ಚಿಬಿದ್ದ ತುಮಕೂರು ಜನ

ಈ ಸುದ್ದಿಯನ್ನು ಶೇರ್ ಮಾಡಿ

chirate
ತುಮಕೂರು,ಜ.31-ಮೊದಲೇ ಚಿರತೆ ಕಾಟದಿಂದ ಭಯಗೊಂಡಿದ್ದ ನಗರದ ಜನತೆಗೆ ಕಿಡಿಗೇಡಿಗಳು ಚಿರತೆ ಬಂತು ಚಿರತೆ ಎಂದು ಅರಣ್ಯ ಇಲಾಖೆಗೆ ದೂರವಾನಿ ಕರೆ ಮಾಡಿ ಮತ್ತಷ್ಟು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕಳೆದ ಎರಡು ವಾರಗಳ ಹಿಂದೆ ಜಯನಗರ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಚಿರತೆ ಸೇರಿ ಭಾರೀ ಅವಾಂತರ ಸೃಷ್ಟಿಸಿತ್ತು. ನಂತರ ಅದೇ ವ್ಯಾಪ್ತಿಯಲ್ಲಿ ಮತ್ತೆ ಕಾಣಿಸಿಕೊಂಡಿತ್ತು. ಮೊನ್ನೆ ಕ್ಯಾತಸಂದ್ರ ಬಳಿ ರೈಲಿಗೆ ಅಡ್ಡವಾಗಿ ಬಂದಿತ್ತು. ಇದರಿಂದ ಮೊದಲೇ ಆತಂಕಗೊಂಡಿದ್ದರು.

ಈ ಸಂದರ್ಭದಲ್ಲೇ ಯಾರೋ ಕಿಡಿಗೇಡಿಗಳು ನಳಂದ ಕಾನ್ವೆಂಟ್ ಬಳಿ ಚಿರತೆ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆಗೆ ಎರಡು ಬಾರಿ ಕರೆ ಮಾಡಿದ್ದಾರೆ. ಕೂಡಲೇ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಹುಡುಕಾಟ ನಡೆಸಿದರು. ಚಿರತೆ ಸಿಗಲಿಲ್ಲವೆಂದು ಕಂಗಾಲಾದ ನಗರದ ಜನತೆ ನಿನ್ನೆಯಿಂದ ಯಾರೂ ಮನೆಯಿಂದ ಹೊರಗೆ ಬಂದಿರಲಿಲ್ಲ. ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸವೆಂದು ಅರಣ್ಯ ಇಲಾಖೆ ಸಿಬ್ಬಂದಿಗಳು ವಾಪಸ್ಸಾದರು.

Facebook Comments

Sri Raghav

Admin