ಚಿರತೆ ಹಾವಳಿಗೆ ನಾಲ್ಕು ಕುರಿಗಳ ಬಲಿ : ಬೆಚ್ಚಿದ ಜನತೆ

ಈ ಸುದ್ದಿಯನ್ನು ಶೇರ್ ಮಾಡಿ

CHANNAPATANNA

ಚನ್ನಪಟ್ಟಣ, ಫೆ.7- ಊರಿಗೆ ನುಗ್ಗಿದ ಚಿರತೆಯೊಂದು ನಾಲ್ಕು ಕುರಿಗಳನ್ನು ಬಲಿ ತೆಗೆದುಕೊಂಡು ಮತ್ತೊಂದು ಕುರಿಯನ್ನು ಹೊತ್ತೊಯ್ದಿರುವ ಘಟನೆ ತಾಲ್ಲೂಕಿನ ಮಾಕಳಿ ಗ್ರಾಮದಲ್ಲಿ ನಡೆದಿದೆ.ತಾಲ್ಲೂಕಿನ ಗಡಿಗ್ರಾಮವಾಗಿರುವ ಮಾಕಳಿಯ ಮಲ್ಲಪ್ಪರ ರಾಮಣ್ಣ ಎಂಬುವರಿಗೆ ಸೇರಿದ ಕುರಿಗಳನ್ನು ಮೇಲೆ ದಾಳಿ ನಡೆಸಿರುವ ಚಿರತೆ ಸ್ಥಳದಲ್ಲಿ ನಾಲ್ಕು ಕುರಿಗಳನ್ನು ಕೋಂದಿದೆ.ಒಂದೇ ತಿಂಗಳಲ್ಲಿ ನಾಲ್ಕೈದು ಬಾರಿ ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದ ಚಿರತೆ ಜನರನ್ನು ಭಯ ಭೀತರನ್ನಾಗಿಸಿದ್ದು ಇದೀಗ ನೆನ್ನೆ ರಾತ್ರಿ ಕುರಿಗಳ ಮೇಲೆ ಚಿರತ ದಾಳಿ ನಡೆಸಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೀಡು ಮಾಡಿದೆ.ಕೆಲ ತಿಂಗಳ ಹಿಂದೆಯೂ ಸಹಾ ಕುರಿ ಹಿಂಡಿನ ಮೇಲೆ ದಾಳಿ ನಡೆದು ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿದು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದರು.ಆದರೀಗ ಮತ್ತೆ ಚಿರತೆಯು ದಾಳಿ ಮಾಡಿರುವುದರಿಂದ ಅದೇ ಚಿರತೆಯೇ ಅಥವಾ ಬೇರೊಂದು ಕಾಡು ಮೃಗ ಈ ಪ್ರದೇಶಕ್ಕೆ ಬಂದಿದೆಯೇ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ.ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಕಳಿ ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಕುರಿಕಳೆದುಕೊಂಡ ಮಲ್ಲಪ್ಪರ ರಾಮಣ್ಣನಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ಆಗ್ರಹ: ರಾಮಣ್ಣನಿಗೆ ಸೇರಿದ ಐದು ಕುರಿಗಳನ್ನು ಚಿರತೆ ದಾಳಿ ಮಾಡಿ ಕೊಂದು ಹಾಕಿರುವುದರಿಂದ ಮೂವತ್ತು ಸಾವಿರಕ್ಕೆ ಹೆಚ್ಚು ನಷ್ಟ ವಾಗಿದ್ದು, ಅರಣ್ಯ ಇಲಾಖೆ ಇವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಕಾಡು ಪ್ರಾಣಿಗಳ ಹಾವಳಿಯಿಂದ ತಿಂಗಳಲ್ಲಿ ನಾಲ್ಕೈದು ಬಾರಿ ಬಡಜನರ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ ಮುಂದೊಂದು ದಿನ ಮನುಷ್ಯರ ಮೇಲೂ ದಾಳಿ ನಡೆಸುವ ಸಾಧ್ಯತೆಗಳಿದ್ದು ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.ಮೂರ್ನಾಲ್ಕು ಕಡೆಗಳಲ್ಲಿ ಬೋನ್‍ಗಳನ್ನು ಇಟ್ಟು ಚಿರತೆ ಸೆರೆಹಿಡಿಯಬೇಕಾಗಿದೆ ಎಲ್ಲದೆ ಜನರಲ್ಲಿರುವ ಆತಂಕವನ್ನು ದೂರಮಾಡಬೇಕೆಂದು ಗ್ರಾಮಸ್ಥರುಯ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin