ಚಿಲ್ಲರೆ ವಿಚಾರವಾಗಿ ಯುವತಿಯೊಂದಿ ಗಲಾಟೆ. ಮನನೊಂದ ಕಂಡಕ್ಟರ್ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Bus

ದಕ್ಷಿಣಕನ್ನಡ, ಸೆ. 25-ಚಿಲ್ಲರೆ ಹಣದ ವಿಚಾರವಾಗಿ ಯುವತಿಯೊಂದಿಗೆ ಜಗಳವಾದ ಹಿನ್ನೆಲೆಯಲ್ಲಿ ಮನನೊಂದ ಬಸ್ ಕಂಡಕ್ಟರ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಗಳೂರಿನ ಗುರುಪುರ ನಿವಾಸಿ ದೇವದಾಸ್ ಆತ್ಮಹತ್ಯೆಗೆ ಶರಣಾದ ಬಸ್ ಕಂಡಕ್ಟರ್. ಬಸ್ಸಿನಲ್ಲಿ ಯುವತಿ ಜೊತೆ 500 ರೂ. ಚಿಲ್ಲರೆಗಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ಕಡಬ ಪೊಲೀಸರು ದೇವದಾಸ್‍ಗೆ ಬುದ್ಧಿವಾದ ಹೇಳಿದ್ದರು. ಇದರಿಂದ ನೊಂದ ಆತ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin