ಚೀಟಿ ನಡೆಸುತ್ತಿದ್ದ ದಂಪತಿ ದಿಢೀರ್ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊರಟಗೆರೆ, ಮಾ.2-ಕೋಟ್ಯಂತರ ರೂ. ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ ದಿಢೀರ್ ನಾಪತ್ತೆಯಾಗಿದ್ದು, ಹಣ ಕಟ್ಟಿದ ನೂರಾರು ಜನ ಆತಂಕಕ್ಕೆ ಒಳಗಾಗಿದ್ದಾರೆ.ಪಟ್ಟಣದ ಕೆಇಬಿ ವಸತಿ ಗೃಹದ ವಾಸಿ ಬೆಸ್ಕಾಂ ಉದ್ಯೋಗಿ ರವಿಕುಮಾರ್ ಮತ್ತು ಈತನ ಪತ್ನಿ ಪ್ರಭಾವತಿ ಕಾಣೆಯಾಗಿರುವವರು.ಇತ್ತೀಚೆಗೆ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಹೊಸ ಮನೆ ಕಟ್ಟಿಸಿಕೊಂಡು ವಾಸವಿದ್ದ ದಂಪತಿ ದಿಢೀರ್ ನಾಪತ್ತೆಯಾಗಿದ್ದಾರೆ.

ಏಜೆಂಟರನ್ನು ನೇಮಿಸಿಕೊಂಡು ದಂಪತಿ ಕೊರಟಗೆರೆ, ತುಮಕೂರು, ಪಾವಗಡ, ಚಿಕ್ಕಬಳ್ಳಾಪುರ, ಆನೇಕಲ್, ಉಜ್ಜನಿ ಹೊಸಹಳ್ಳಿ, ಬೆಂಗಳೂರಿನ ಹುಣಸಮಾರನಹಳ್ಳಿ, ಮಾದಾವರ, ದೊಡ್ಡಬಳ್ಳಾಪುರ, ಬಾಗೇಪಲ್ಲಿ ಇನ್ನೂ ಮುಂತಾದ ಕಡೆ ಚೀಟಿ ವ್ಯವಹಾರ ನಡೆಸುತ್ತಿದ್ದರು.ಮನೆಗೆ ಬೀಗ ಹಾಕಿಕೊಂಡು ಹೋಗಿರುವ ದಂಪತಿ ಕಳೆದ ಒಂದು ವಾರದಿಂದ ವಾಪಸ್ಸಾಗಿಲ್ಲ ಅವರು ಎಲ್ಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ.ಈ ಸಂಬಂಧ ದಂಪತಿಯ ಸಾಕುಮಗಳು ಪೊಲೀಸರಿಗೆ ದೂರು ನೀಡಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin