ಚೀನಾಕ್ಕೆ ಸೆಡ್ಡು ಹೊಡೆಯಲು ಮುಂದಾದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ

India-Vs-China--01

ನವದೆಹಲಿ,ಜು.9- ಗಡಿರೇಖೆಯಲ್ಲಿ ಭಾರತೀಯ ಮತ್ತು ಚೀನಾದ ಸೈನ್ಯಗಳ ನಡುವಿನ ಬಿಕ್ಕಟ್ಟು ಮುಂದುವರಿಕೆ ಸಂದರ್ಭದಲ್ಲಿ ಚೀನಾಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಭಾರತ ಮುಂದಿನ 69ನೇ ವರ್ಷದ ಗಣರಾಜ್ಯೋತ್ಸವ ಪರೇಡ್‍ಗೆ ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಂಘ(ಆಸಿಯಾನ್)ದ ಮುಖ್ಯಸ್ಥರನ್ನು ಆಹ್ವಾನಿಸುವ ಯೋಜನೆ ಹಮ್ಮಿಕೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮೊನ್ನೆ ಭಾರತ-ಆಸಿಯಾನ್ ಮಾತುಕತೆಯ 9ನೇ ಆವೃತ್ತಿಯಲ್ಲಿ ತಿಳಿಸಿದರು.

10 ಸದಸ್ಯ ರಾಷ್ಟ್ರಗಳನ್ನು ಹೊಂದಿದ ಆಸಿಯಾನ್ ದೇಶಗಳ ಜೊತೆ ಭಾರತದ ಸಂಬಂಧವನ್ನು ವೃದ್ಧಿಸಲು ಪ್ರಯತ್ನಗಳು ನಡೆಯುತ್ತಿವೆ. ಈಸ್ಟ್ ಪಾಲಿಸಿ ಆಕ್ಟ್ ನ ಹೃದಯದಲ್ಲಿ ಏಷ್ಯಾನ್ ರಾಷ್ಟ್ರಗಳಿಗೆ ಸ್ಥಾನ ಕಲ್ಪಿಸಲಾಗುತ್ತಿದೆ. ಆಸಿಯಾನ್ ರಾಷ್ಟ್ರ ಸ್ಥಾಪನೆಯ ಶತಮಾನೋತ್ಸವದ ಕನಸಿನ ಮಧ್ಯದಲ್ಲಿದ್ದೇವೆ. ಆಸಿಯಾನ್ ಮತ್ತು ಭಾರತ ಸಹಜ ಪಾಲುದಾರ ದೇಶಗಳಾಗಿದ್ದು ಭೌಗೋಳಿಕ,ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳನ್ನು ಹೊಂದಿವೆ ಎಂದು ಸುಷ್ಮಾ ಸ್ವರಾಜ್ ಹೇಳಿರುವುದಾಗಿ ವರದಿಯಾಗಿದೆ.

ಆಗ್ನೇಯ ಏಷ್ಯಾದಲ್ಲಿ ನಮ್ಮ ಸಂಬಂಧವನ್ನು ವೃದ್ಧಿಸಿಕೊಂಡಿದ್ದೇವೆ. ಅದು 2014ರಲ್ಲಿ ಪ್ರಧಾನಿ ಮೋದಿಯವರು ಮ್ಯಾನಾರ್‍ನಲ್ಲಿ ನಡೆದ ಭಾರತ-ಏಷ್ಯಾ ಶೃಂಗಸಭೈಯಲ್ಲಿ ಮಾಡಿದ ಭಾಷಣದಿಂದ ಗೊತ್ತಾಗಿದೆ. ಅಲ್ಲಿ ಮೋದಿಯವರು ಭಾರತದ ಪೂರ್ವ ನೀತಿ ಈಸ್ಟ್ ಪಾಲಿಸಿ ಆಕ್ಟ್ ಎಂದಾಗಿದೆ ಎಂದು ಹೇಳಿದ್ದರು. ಬ್ರುನೈ, ಕಾಂಬೋಡಿಯಾ, ಇಂಡೋನೇಷಿಯಾ, ಲಾವೋಸ್, ಮಲೇಷಿಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಪೂರ್, ಥಾಯ್ಲೆಂಡ್ ಮತ್ತು ವಿಯೆಟ್ನಾಂಗಳು ಆಸಿಯಾನï ರಾಷ್ಟ್ರಗಳ ಸದಸ್ಯ ರಾಷ್ಟ್ರಗಳಾಗಿವೆ. ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವೆ ಸಂಬಂಧ ಮತ್ತು ಮಾತುಕತೆ ನಡೆದು 25 ವರ್ಷಗಳು ಕಳೆದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin