ಚೀನಾಗೆ ತಕ್ಕ ಉತ್ತರ ಕೊಡಲು ನಾವೂ ಸನ್ನದ್ಧರಾಗಿದ್ದೇವೆ : ಸುಷ್ಮಾ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

Sushma-Swaraj

ನವದೆಹಲಿ, ಜು.20- ಭಾರತದ ಗಡಿಯನ್ನು ರಕ್ಷಿಸಿಕೊಳ್ಳಲು ನಾವು ಸಮರ್ಥರಿದ್ದೇವೆ. ಚೀನಾವನ್ನು ಎದುರಿಸಲು ನಾವು ಶಕ್ತರಾಗಿದ್ದೇವೆ. ಈ ವಿಷಯದಲ್ಲಿ ನಮ್ಮ ನಿಲುವನ್ನು ಎಲ್ಲಾ ದೇಶಗಳು ಸಮ್ಮತಿಸಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿಂದು ಚೀನಾಕ್ಕೆ ತಿರುಗೇಟು ನೀಡಿದ್ದಾರೆ. ಸಿಕ್ಕಿಂನ ಡೊಕ್ಲಾಮ್ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಸಂಬಂಧ ಸದನದಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ನಮ್ಮ ಗಡಿ ರಕ್ಷಣೆ ನಮ್ಮ ಆದ್ಯ ಹೊಣೆಗಾರಿಕೆಯಾಗಿದ್ದು, ಅದಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ಈಗ ಅಸ್ತಿತ್ವದರುವ ತ್ರಿರಾಷ್ಟ್ರ ಗಡಿ ಸರಹದ್ದನ್ನು ಪರಿವರ್ತಿಸಲು ಸಾಧ್ಯವಿಲ್ಲ. ಚೀನಾದ ನಿಲುವನ್ನು ಭಾರತ ಮತ್ತು ಭೂತಾನ್ ಸ್ಪಷ್ಟವಾಗಿ ವಿರೋಧಿಸಿದೆ ಎಂದು ಸುಷ್ಮಾ ಹೇಳಿದರು.

ಚೀನಾದೊಂದಿಗಿನ ಬಿಕ್ಕಟ್ಟು ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದಾಗ, ಈ ಬಗ್ಗೆ ಸರ್ಕಾರೊಂದಿಗೆ ಮಾತನಾಡಿ ನಿರ್ಧಾರ ತಿಳಿಸುವುದಾಗಿ ವಿದೇಶಾಂಗ ಸಚಿವರು ಸದನಕ್ಕೆ ಭರವಸೆ ನೀಡಿದರು. ಸಂಸದರಾದ ಛಾಯಾ ವರ್ಮ ಮಾತನಾಡಿ, ಚೀನಾ ಸಮುದ್ರ ಮಾರ್ಗದಲ್ಲಿ ಸೇನೆಯನ್ನು ನಿಯೋಜಿಸಿದೆಯೇ, ಭಾರತದ ನೆರೆ ರಾಷ್ಟ್ರಗಳಲ್ಲಿ ಚೀನಾದ ಸೇನೆ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ, ಚೀನಾ ಏಕಪಕ್ಷೀಯವಾಗಿ ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿದೆ. ಆದರೆ ಇದರಿಂದ ಭಾರತದ ಭದ್ರತೆ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಚೀನಾ ಏಕಪಕ್ಷೀಯವಾಗಿ ಮೂರು ದೇಶಗಳ ಗಡಿಯನ್ನು ಬದಲಿಸಲು ಪ್ರಯತ್ನಿಸುತ್ತಿದೆ. ಗಡಿಯಲ್ಲಿ ಚೀನಾ ನಿರ್ಮಾಣ ಸಲಕರಣೆಗಳನ್ನು ಸಂಗ್ರಹಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸುಷ್ಮಾ ಅವರು ಸಂಸತ್ತಿನಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin