ಚೀನಾದಲ್ಲಿ ಕಲ್ಲಿದ್ದಲು ಗಣಿ ಸ್ಪೋಟಗೊಂಡು 18 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

18-Ki

ಬೀಜಿಂಗ್, ಸೆ.29 – ಚೀನಾದ ವಾಯುವ್ಯ ನಿಂಗ್‍ಕ್ಸಿಯಾ ಪ್ರಾಂತ್ಯದಲ್ಲಿ ನಿನ್ನೆ ಕಲ್ಲಿದ್ದಲು ಗಣಿಯೊಳಗೆ ಸಂಭವಿಸಿದ ಸ್ಫೋಟದಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಶಿಜುಯಿಶಾನ್ ನಗರದಲ್ಲಿನ ಪುಟ್ಟ ಕಲ್ಲಿದ್ದಲು ಗಣಿಯೊಳಗೆ 20 ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ, ಅನಿಲದಿಂದ ಸ್ಫೋಟ ಸಂಭವಿಸಿದ್ದು, ಎಲ್ಲರೂ ಆಹುತಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ಚಟುವಟಿಕೆಯಿಂದಲೇ ಈ ಸ್ಫೋಟ ಸಂಭವಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಚೀನಾದ ಅನೇಕ ಪ್ರಾಂತ್ಯಗಳಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಅವ್ಯಾಹತವಾಗಿ ಮುಂದುವರಿದಿದ್ದು, ದುರಂತಗಳಿಗೆ ಕಾರಣವಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin